ರಂಗೋಲಿಯಲ್ಲಿ ಮೂಡಿದ ಅಚ್ಚರಿಯ ಕಲಾಕೃತಿಗಳು

Mix collage
Published on

ಕಾರವಾರ: ದಸರಾ ಅಂಗವಾಗಿ ತಾಲೂಕಿನ ಸದಾಶಿವಗಡ ಶಿವಾಜಿ ಸಂಯುಕ್ತ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಗಮನ ಸೆಳೆಯಿತು.

ಹೈಸ್ಕೂಲ್ ಹಾಗೂ ಕಾಲೇಜ್ ವಿದ್ಯಾರ್ಥಿಗಳು, ಸ್ಥಳೀಯ ಪ್ರಸಿದ್ಧ ಕಲಾವಿದರು. ಒಟ್ಟು 80 ಕ್ಕೂ ಅಧಿಕ ರಂಗೋಲಿಗಳನ್ನು ಬಿಡಿಸಿದ್ದರು. ಚುಕ್ಕಿ ಚಿತ್ರಗಳ ಜತೆಗೆ, ಕಾಂತಾರ-1 ಚಲನಚಿತ್ರದ ರ ರಿಷಬ್ ಶೆಟ್ಟಿ ಪಾತ್ರ, ಶಿವಾಜಿ ಮಹಾರಾಜ್, ಬುದ್ಧ , ಕಾಳಿ ಮಾತೆ ಹೀಗೆ ವಿವಿಧ ರಂಗೋಲಿಗಳು ಥೇಟ್ ಫೋಟೋದಂತೆಯೇ ಭಾಸವಾಗುವಷ್ಟು ನಿರ್ದಿಷ್ಟವಾಗಿದ್ದವು. ಒಟ್ಟಿನಲ್ಲಿ ಶಾಲೆಯ ಕೊಠಡಿಯಲ್ಲಿ ಒಂದು ಕಲಾ ಪ್ರಪಂಚವೇ ಸೃಷ್ಟಿಯಾಗಿತ್ತು. ಸಾವಿರಾರು ಜನ ಆಗಮಿಸಿ, ರಂಗೋಲಿಗಳನ್ನು ವೀಕ್ಷಿಸಿ ಬೆರಗಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net