ಡ್ಯಾಂ ಗೇಟ್‌ಗಳ ದುರಸ್ತಿ

dj mlk dyam
Published on

ಮೊಳಕಾಲ್ಮೂರು: ತಾಲೂಕಿನ ರಂಗಯ್ಯನದುರ್ಗ ಜಲಾಶಯದ ನೀರು ವ್ಯರ್ಥವಾಗುತ್ಗತಿರುವ ಕುರಿತು ವಿಜಯವಾಣಿಯಲ್ಲಿ ಬುಧವಾರ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ.

ವರದಿ ಪ್ರಕಟ ಬೆನ್ನಲ್ಲೇ ಜಲಾಶಯಕ್ಕೆ ಬುಧವಾರ ಬೆಳಗ್ಗೆಯೇ ಆಗಮಿಸಿದ ಅಧಿಕಾರಿಗಳು, ದುರಸ್ತಿ ಕಾರ್ಯ ಕೈಗೊಂಡರು.

ಪಟ್ಟಣಕ್ಕೆ ಕುಡಿಯುವ ನೀರಿನ ಆಸರೆಯಾಗಿರುವ ಡ್ಯಾಂ ಜಾಕ್‌ವೆಲ್‌ಗಳು ದುರಸ್ತಿ ಕಾಣದ ಪ್ರಯುಕ್ತ ನೀರು ವ್ಯರ್ಥವಾಗಿ ಹರಿಯುತ್ತಿದ್ದು, ಇದಕ್ಕೆ ತಡೆ ಹಾಕುವ ಕ್ರಮಕೈಗೊಂಡರು.

ತಿಂಗಳ ಹಿಂದೆ ದುರಸ್ತಿ ಮಾಡಲಾಗಿದ್ದರೂ ಯಾರೋ ಜಾಕ್‌ವೆಲ್‌ಗೆ ಕಬ್ಬಿಣದ ರಾಡ್‌ಗಳಿಂದ ಡ್ಯಾಮೇಜ್ ಮಾಡಿದ್ದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಇಂಜಿನಿಯರ್ ಭೀಮರಾಜ್ ಮಾಹಿತಿ ನೀಡಿದರು.

ಈಗಾಗಲೇ ದುರಸ್ತಿ ಕಾರ್ಯ ಕೈಗೊಂಡಿದ್ದು, ನೀರಿನಲ್ಲಿರುವ ಜಾಕ್‌ವೆಲ್‌ಗಳ ದುರಸ್ತಿಗೆ ದಾವಣಗೆರೆಯಿಂದ ಪರಿಣಿತರನ್ನು ಕರೆಸಲಾಗುವುದು ಎಂದು ಎಇಇ ಅಣ್ಣಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net