

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೇರೆ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಅಲ್ಲಿನ ಸ್ಥಳೀಯ ಸೊಗಡನ್ನು ಸಾರುವಂತಹ ವಿಭಿನ್ನ ಬಗೆಯ ಸೃಜನಾತ್ಮಕ ನಾಟಕಗಳನ್ನು ರಂಗಾಯಣವು ಪ್ರದರ್ಶನ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.
ನಗರದ ರಂಗಾಯಣವು ಪಂ. ಬಸವರಾಜ ರಾಜಗುರು ಬಯಲು ರಂಗಮ0ದಿರದಲ್ಲಿ ಆಯೋಜಿಸಿದ್ದ ರಂಗಾ0ತರ0ಗ- 2025 ಬಹುಭಾಷಾ ನಾಟಕೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಂಗಾಯಣವು ಕನ್ನಡ ಮಾತ್ರವಲ್ಲದೆ ಹಿಂದಿ ನಾಟಕ ಸಿದ್ಧಪಡಿಸಿ ಪ್ರದರ್ಶನ ನೀಡುವ ಮೂಲಕ ನೋಡುಗರಿಗೆ ಬೇರೆ ಭಾಷೆಯ ಕುರಿತು ಅರಿವು ಮೂಡಿಸುತ್ತಿದೆ. ನಾಟಕಗಳು ಕಾಲದಿಂದ ಕಾಲಕ್ಕೆ ಹೊಸತನದ ರೂಪವನ್ನು ಪಡೆದು ರಂಗಾಸಕ್ತರಿಗೆ ನಾಟಕದ ಹೊಸ ರುಚಿಯನ್ನು ನೀಡುತ್ತದೆ ಎಂದರು.
ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಮಾತನಾಡಿ, ರಂಗಾಯಣವು ಆಯೋಜಿಸಿರುವ ಬಹುಭಾಷಾ ನಾಟಕೋತ್ಸವವವು ಹೊಸತನಕ್ಕೆ ಸಾಕ್ಷಿಯಾಗಿದೆ ಎಂದರು.
ರAಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ಆಡಳಿತಾಽಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ಬಹುಭಾಷಾ ನಾಟಕೋತ್ಸವದ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ನಂತರ ರಂಗಾಯಣ ತಾತ್ಕಾಲಿಕ ರೆಪರ್ಟರಿ ಹಾಗೂ ಲಿವಿಂಗ್ ಲೈಟ್ಲಿ ಹಾಗೂ ಬಾಂಬೆ ಥಿಯೇಟರ್ ಗ್ರುಪ್‌ನಿಂದ `ಗ್ವಾಲೆ ಮತವಾಲೆ' ಹಿಂದಿ ನಾಟಕ ಪ್ರಸ್ತುತಪಡಿಸಲಾಯಿತು.