

ಕಡೂರು: ತಾಲೂಕಿನ ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಆರ್.ರಂಗನಾಥ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷ ಕಡೂರಹಳ್ಳಿ ಪ್ರಶಾಂತ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಆರ್.ರಂಗನಾಥ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಶಶಿಕಾಂತ್ ರಂಗನಾಥ್‌ಅವರ ಅವಿರೋಧ ಆಯ್ಕೆ ಘೋಷಿಸಿದರು.
ನಂತರ ನಡೆದ ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷ ಎಚ್.ಆರ್. ರಂಗನಾಥ್ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ಸಂಘದ ಆಡಳಿತ ಮಂಡಳಿ ಒತ್ತು ಕೊಟ್ಟಿರುವ ಹಿನ್ನಲೆಯಲ್ಲಿ ಬ್ಯಾಂಕ್ ಬೆಳವಣಿಗೆಗೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ನಿರ್ದೇಶಕರ ವಿಶ್ವಾಸದೊಂದಿಗೆ ಸಂಘದ ಏಳ್ಗಿಗೆಗೆ ಶ್ರಮಿಸಲಾಗುತ್ತದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ಈ ಹಿಂದೆ ನಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಂಘದಡಿ ಗೋದಾಮು ನಿರ್ಮಾಣದ ಕಾರ್ಯಕ್ಕೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ 4 ಲಕ್ಷ ಮತ್ತು ಪಿಠೋಪಕರಣಗಳಿಗೆ 1 ಲಕ್ಷ ರೂ. ಅನುದಾನ ನೀಡಿದ್ದರು. ಜತೆಯಲ್ಲಿ ರೈತರಿಗೆ ಕೃಷಿ ಸಾಲ ನೀಡಲು ಅಪೆಕ್ಸ್ ಬ್ಯಾಂಕ್‌ನಿಂದ 5 ಕೋಟಿ ರೂ.ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಿದ್ದರಿಂದ ಸಂಘದಿಂದ ರೈತರಿಗೆ ಹೆಚ್ಚಿನ ಸಹಕಾರ ನೀಡಿದಂತಾಯಿತು ಎಂದರು.
ವಿಎಸ್‌ಎಸ್‌ಎನ್ ಸಂಘದ ಎಲ್ಲ ನಿರ್ದೇಶಕರ ಒಗ್ಗಟ್ಟು ಇಂದಿಗೂ ಅಭಿವೃದ್ಧಿಗೆ ಶ್ರಮಿಸುತ್ತಿದೆ. ನೂತನ ಅಧ್ಯಕ್ಷರು ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಿ ಎಂದು ಆಶಿಸಿದರು. ಉಪಾಧ್ಯಕ್ಷ ರುದ್ರಪ್ಪ, ನಿರ್ದೇಶಕರಾದ ಈಶ್ವರಪ್ಪ, ತೇಜ್‌ರಾಜು, ಮೇಘರಾಜ್, ದ್ರಾಕ್ಷಯಣಮ್ಮ, ರಾಜಪ್ಪ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್, ಕಾರ್ಯದರ್ಶಿ ಗಂಗಾಧರ್‌ನಾಯ್ಕ ಮತ್ತಿತರಿದ್ದರು.