ರಂಗಭೂಮಿಯಿಂದ ಪರಿವರ್ತನೆ ಸಾಧ್ಯ, ರಂಗಶಿಕ್ಷಣ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಸಿದ್ದರಾಜು ಅಭಿಪ್ರಾಯ

19 Nela Ph 03 Natakada Drushya
Published on

ನೆಲಮಂಗಲ: ಸಾಮಾಜಿಕ ಚಿಕಿತ್ಸಕವಾಗಿ ಕೆಲಸ ಮಾಡುತ್ತಿರುವ ರಂಗಭೂಮಿಯಿಂದ ಪರಿವರ್ತನೆ ಸಾಧ್ಯ ಎಂದು ರಂಗಶಿಕ್ಷಣ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಸಿದ್ದರಾಜು ಅಭಿಪ್ರಾಯಪಟ್ಟರು.

ಪಟ್ಟಣ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತುಮಕೂರು ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಹಾಗೂ ಸಿಂಚನ ಕಲಾಕೇಂದ್ರ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ನಾವೆಲ್ಲಿದ್ದೇವೆ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ರಾಜ್ಯದೆಲ್ಲೆಡೆ ಪ್ರಸಿದ್ಧ ನಾಟಕಗಳ ಪ್ರದರ್ಶನ ನೀಡಿದ್ದ ಕ್ರಿಯಾತ್ಮಕ ರಂಗ ತಂಡ ತಾಲೂಕು ಕೇಂದ್ರದಲ್ಲೂ ಪ್ರದರ್ಶನ ನೀಡಲು ಆಗಮಿಸಿರುವುದು ಸಂತಸ ತಂದಿದೆ. ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದುಕೊಂಡು ಅನೇಕ ಕಲಾವಿದರ ಕಲಾ ಸಂಸ್ಥೆ ಕಟ್ಟಿಕೊಂಡು ಕಲಾಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ ಎಂದರು.

ಮಾನಸಿಕ ಒತ್ತಡ ಕಡಿಮೆ ಮಾಡಬಲ್ಲ ಶಕ್ತಿ ರಂಗಭೂಮಿಗಿದೆ. ಕೆಲವೊಮ್ಮೆ ವೈದ್ಯರಿಂದಲೂ ಸಾಧ್ಯವಾಗದ ಪವಾಡಗಳನ್ನು ರಂಗ ಕಲೆ ಮಾಡಲಿದೆ ಎಂದರು.

ಸಾಹಿತಿ ಡಾ.ಶಿವಲಿಂಗಯ್ಯ ಮಾತನಾಡಿ, ಮಕ್ಕಳಲ್ಲಿ ಕಲೆ, ಸಾಹಿತ್ಯ ಸಂಗೀತದಂತಹ ಕಲೆಗಳನ್ನು ತೊಡಗಿಸುವ ಕೆಲಸವಾದಲ್ಲಿ ಸುಂದರ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ನಾಟಕ ಪ್ರದರ್ಶನ: ತುಮಕೂರು ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಕಲಾವಿದರ ವ್ಯಾಸದೇಶಪಾಂಡೆ ರಚಿಸಿ ಶಿವಕುಮಾರ್ ತಿಮ್ಮಲಾಪುರ ನಿರ್ದೇಶಿಸಿದ್ದ ನಾವೆಲ್ಲಿದ್ದೇವೆ ಸಾಮಾಜಿಕ ನಾಟಕ ಪ್ರದರ್ಶಿಸಿದರು. ಸಿಂಚನಕಲಾಟ್ರಸ್ಟ್ ಅಧ್ಯಕ್ಷ ಸಿ.ಎಚ್.ಸಿದ್ದಯ್ಯ ನಾಟಕಕ್ಕೆ ಸಂಗೀತ ನೀಡಿದರೆ, ಕಾಂತರಾಜು ಕೌತಮಾರನಹಳ್ಳಿ ರಂಗವಿನ್ಯಾಸ ಮಾಡಿದ್ದರು.

ಹಿರಿಯ ಸಾಹಿತಿ ಸಿರಾಜ್‌ಅಹಮದ್‌ಸೊರಬ, ರಂಗಶಿಕ್ಷಣ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸಿದ್ದರಾಜು, ದಾವಣಗೆರೆ ಗುರುಸಂಸ್ಥೆ ಕಾರ್ಯದರ್ಶಿ ಎನ್.ಎಸ್.ಹರೀಶ್‌ನಾಯ್ಕ, ಬಿಜೆಪಿ ಮುಖಂಡ ಬಾಳೆಕಾಯಿ ನಾಗರಾಜು, ವಿಕಾಸ ಸಂಸ್ಥೆ ಅಧ್ಯಕ್ಷ ಎಂ.ನಾಗರಾಜು, ಅಂಜನಾದ್ರಿ ಕಲಾಕೇಂದ್ರ ಟ್ರಸ್ಟ್ ಅಧ್ಯಕ್ಷ ಚಿಕ್ಕಮಾರನಹಳ್ಳಿದಿನೇಶ್, ಕಲಾವಿದ ದೊಡ್ಡೇರಿಬೈಲಪ್ಪ, ಯಶೋದಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net