

ಸೇಡಂ: ಕಲಬುರಗಿಯ ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ನ.18, 19ರಂದು ನಡೆಯುವ ನಾಟಕೋತ್ಸವದಲ್ಲಿ ಕೊಡಮಾಡುವ ರಂಗ ಸುವರ್ಣ ಪ್ರಶಸ್ತಿಗೆ ಸೇಡಂನಿAದ ಶ್ರೀಮಂತ ಹದಗಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಂಗಮಿತ್ರ ನಾಟ್ಯ ಸಂಘದ ಗೌರವ ಕಾರ್ಯದರ್ಶಿ ಲಕ್ಷö್ಮಣ ಅವಂಟಿ ಹೇಳಿದರು.
ರಾಜ್ಯೋತ್ಸವದ ನಿಮಿತ್ತ ಎರಡು ದಿನ ನಾಟಕೋತ್ಸವ ನಡೆಸಲಾಗುತ್ತಿದೆ. ಜಿಲ್ಲೆಯ 7 ತಾಲೂಕಿನಿಂದ ತಲಾ ಒಬ್ಬರಂತೆ ರಂಗಭೂಮಿ ಕಲೆಯ ಆರಾಧಕರನ್ನು ಗುರುತಿಸಿ ರಂಗ ಸುವರ್ಣ ಪ್ರಶಸ್ತಿ ನೀಡಲಾಗುತ್ತಿದೆ. ಪುರಸ್ಕಾರವೂ 5 ಗ್ರಾಂ ಬಂಗಾರ ಒಳಗೊಂಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಘದ ಅಧ್ಯಕ್ಷ ಶಾಮರಾವ ಕೊರವಿ ಮಾತನಾಡಿದರು.
ಪ್ರಮುಖರಾದ ಶಂಕರ ಹೂವಿನಹಿಪ್ಪರಗಿ, ಸಂಗಣ್ಣ ಅಲ್ದಿ, ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ಸಂತೋಷ ಕನ್ನಾ, ದತ್ತಾತ್ರೇಯ ಬುಕ್ಕಾ, ಗೈಬಣ್ಣ ವಾಲಿಕಾರ, ರಾಜು ಮಂಗಲಗಿ, ರುದ್ರಗೌಡ ಹಂಗನಹಳ್ಳಿ, ಮಲ್ಲಿಕಾರ್ಜುನ ಮಂಗಲಗಿ ಇದ್ದರು.