ನೇಕಾರ ಸಮಾಜದಿಂದ ಪ್ರತಿಭಾ ಪುರಸ್ಕಾರ ಜು.7ರಂದು

Published on

ರಾಣೆಬೆನ್ನೂರ: ತಾಲೂಕು ಪಟ್ಟಸಾಲಿ (ನೇಕಾರ) ಸಮಾಜದ ನೌಕರರ ಸಂಘದ ವತಿಯಿಂದ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜು.7ರಂದು ಬೆಳಗ್ಗೆ 10.30ಕ್ಕೆ ನಗರದ ಹಳೇ ಪಿ.ಬಿ.ರಸ್ತೆ ಶ್ರೀ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಸಂಘದ ಅಧ್ಯಕ್ಷ ಗೋಪಾಲ ಗುತ್ತಲ ಅಧ್ಯಕ್ಷತೆ ವಹಿಸುವರು. ಸ್ಥಳೀಯ ಸಿದ್ದು ಸೇವಾ ಟ್ರಸ್ಟ್ ಅಧ್ಯಕ್ಷ ಈಶ್ವರ ಚಿನ್ನಿಕಟ್ಟಿ ಉದ್ಘಾಟಿಸುವರು. ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ಕದರಮಂಡಲಗಿ, ಭದ್ರಾವತಿ ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ, ಕಾಕಿ ಜನಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಕಾಕಿ, ಪಟ್ಟಸಾಲಿ ಸಮಾಜ ಸುಧಾರಣಾ ಸಮಿತಿ ಅಧ್ಯಕ್ಷ ರಮೇಶ ಗುತ್ತಲ, ಜಿಲ್ಲಾ ನೇಕಾರ ಒಕ್ಕೂಟ ಮಾಜಿ ಅಧ್ಯಕ್ಷ ಶಂಕ್ರಣ್ಣ ನ್ಯಾಮತಿ, ವರ್ತಕ ಚಂದ್ರಶೇಖರ ನ್ಯಾಮತಿ, ಶಿಕ್ಷಣ ಸಂಯೋಜಕಿ ಸುನಿತಾ ಡಿ.ಬಿ, ಫ್ರೆಶ್‌ಗ್ರೀನ್ ಆಗ್ರೋ ಟೆಕ್ ಎಂಡಿ ಕರಬಸಪ್ಪ ಜಾಡರ, ಎಲ್‌ಐಸಿ ನಿವೃತ್ತ ಅಧಿಕಾರಿ ಬಸವರಾಜ ಹಿಂಡಸಗೇರಿ, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಪಿ.ಕೆ.ಕದರಮಂಡಲಗಿ, ಬ್ಯಾಡಗಿ ವೈದ್ಯಾಧಿಕಾರಿ ಹರೀಶ ನ್ಯಾಮತಿ, ಪಟ್ಟಸಾಲಿ ಸಮಾಜ ಮಹಿಳಾ ಘಟಕ ಅಧ್ಯಕ್ಷ ವೀಣಾ ವಿಭೂತಿ, ಪಟ್ಟಸಾಲಿ ಸಾಲೇಶ್ವರ ಸಮಾಜ ಯುವಕ ಸಂಘದ ಅಧ್ಯಕ್ಷ ಕರಬಸಪ್ಪ ಕದರಮಂಡಲಗಿ ಮತ್ತಿತರರು ಭಾಗವಹಿಸುವರಯ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net