ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ

8 HVR 4
Published on

ರಾಣೆಬೆನ್ನೂರ: ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಥಳೀಯ ಗ್ರೋಗ್ರಿನ್, ಕೃಷಿ ಪದವಿಧರರ ಸಂಘ ಹಾಗೂ ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಸೈಕ್ಲೋಥಾನ್ ಜಾಥಾ ಜರುಗಿತು.
ನಗರದ ಕೋರ್ಟ್ ಆವರಣದಲ್ಲಿ ನ್ಯಾಯಾಧೀಶೆ ಅನಿತಾ ಸೈಕ್ಲೋಥಾನ್ ಜಾಥಾಕ್ಕೆ ಚಾಲನೆ ನೀಡಿದರು. ನೂರಾರು ಮಕ್ಕಳು, ಪದಾಧಿಕಾರಿಗಳು ಸೈಕಲ್ ಏರಿ ಹಳೇ ಪಿ.ಬಿ.ರಸ್ತೆ ಮಾರ್ಗವಾಗಿ ಹಲಗೇರಿ ಕ್ರಾಸ್, ಕುರುಬಗೇರಿ ಕ್ರಾಸ್, ಸಿದ್ದೇಶ್ವರ ದೇವಸ್ಥಾನ, ಮಾರುತಿ ನಗರ, ಬೆನಕನಕೊಂಡ ರಸ್ತೆ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಗವಳಿ ಓಣಿ, ಗೂಡ್ಸ್‌ಶೆಡ್ ರಸ್ತೆ, ರಂಗನಾಥ ನಗರ ರಸ್ತೆ, ಸಂಗಮ್ ಸರ್ಕಲ್, ರೇಲ್ವೆ ಸ್ಟೇಷನ್, ಪೊಲೀಸ್ ಸ್ಟೇಷನ್ ರಸ್ತೆ, ಅಶೋಕ ಸರ್ಕಲ್, ಪೋಸ್ಟ್ ವೃತ್ತ, ಬಸ್‌ನಿಲ್ದಾಣ ರಸ್ತೆ, ಕೆಇಬಿ ವಿನಾಯಕ ದೇವಸ್ಥಾನ, ಹಳೇ ಮಾಗೋಡ ರಸ್ತೆ, ಅಯ್ಯಪ್ಪಸ್ವಾಮಿ ದೇವಸ್ಥಾನ, ಸಾಯಿಬಾಬಾ ದೇವಸ್ಥಾನ, ಹಳೇ ಪಿ.ಬಿ.ರಸ್ತೆ, ಎನ್.ವಿ.ಹೋಟೆಲ್ ಮಾರ್ಗಗಳಲ್ಲಿ ಸಂಚರಿಸಿದರು. ಮೆಡ್ಲೇರಿ ರಸ್ತೆ ಗಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ಜಾಥಾ ಕೊನೆಗೊಂಡಿತು.
ಡಿವೈಎಸ್‌ಪಿ ಡಾ.ಗಿರೀಶ ಬೋಜಣ್ಣನವರ, ಸಿಪಿಐ ಡಾ.ಶಂಕರ, ಗೋ ಗ್ರೀನ್ ಸಂಚಾಲಕ ಡಾ.ಗಿರೀಶ ಕೆಂಚಪ್ಪನವರ, ರಾಕೇಶರೆಡ್ಡಿ, ಸುಧೀರ ಕುರವತ್ತಿ, ಮಲ್ಲಿಕಾರ್ಜುನ ಅಂಗಡಿ, ಗದಿಗೆಪ್ಪ ಹೊಟ್ಟಿಗೌಡ್ರ, ಜಿ.ಎಸ್.ರಾಮಚಂದ್ರ, ಬಸವರಾಜ ಹುಲ್ಲತ್ತಿ, ದೇವಕುಮಾರ, ಬಸವರಾಜ ಪಾಟೀಲ, ವಾಸು ಸಾವಕಾರ, ಮನೋಜ ಸಾವಕಾರ, ಶಿಲ್ಪಾ ಸಾವಕಾರ, ವಿಜಯ ಮುಂಡಾಸದ, ಹೇಮಾ ಪಾಟೀಲ, ಮತ್ತಿತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net