ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

3 HVR 8
Published on

ರಾಣೆಬೆನ್ನೂರ: ಪರಿಸರದ ವಿರುದ್ಧವಾಗಿ ನಡೆದುಕೊಂಡರೆ ಮನುಷ್ಯನ ಬದುಕು ದಿನದಿಂದ ದಿನಕ್ಕೆ ದುರ್ಬಲವಾಗುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸುರಭಿ ಸೇವಾಚಾರ್ಯ ಚಾರಿಟೆಬಲ್ ಟ್ರಸ್ಟ್ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ರೇವಣಕರ ಹೇಳಿದರು.
ಇಲ್ಲಿನ ಬೀರೇಶ್ವರ ನಗರದ ಶ್ರೀ ಬಲಮುರಿ ಗಣಪತಿ ದೇವಸ್ಥಾನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿನೆಟ್ಟು ಅವರು ಮಾತನಾಡಿದರು. ಮನುಷ್ಯನ ದುರಾಸೆಗೆ ಪರಿಸರ ಸಂಪೂರ್ಣ ನಾಶವಾಗುತ್ತಿದ್ದು ಇದರಿಂದ ಮನುಷ್ಯನ ಬದುಕು ಅಧೋಗತಿಯತ್ತ ಸಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಒಂದೊಂದು ಗಿಡಗಳನ್ನು ನಡೆಸುವುದರ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ಕೊಡಬೇಕಾಗಿದೆ. ಅದೇ ರೀತಿ ಜಲಮೂಲಗಳ ರಕ್ಷಣೆಗೆ ನಾವು ಆಸಕ್ತಿ ತೋರದೆ ಇರುವ ಕಾರಣ ನೀರಿಗೂ ಕೊರತೆ ಉಂಟಾಗಿದೆ ಹಾಗಾಗಿ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ನಾವು ಕೈಗೊಂಡಾಗ ಮಾತ್ರ ಪರಿಸರ ನಮ್ಮ ಸಂರಕ್ಷಣೆ ಮಾಡುತ್ತದೆ ಎಂದರು.
ಐ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಅನಿತಾ ವಿಠಲ್ಕರ, ಖಜಾಂಚಿ ವೀಣಾ ರೇವಣಕರ ಹಾಗೂ ಸದಸ್ಯರಾದ ಭಾರತಿ ವರ್ಣಿಕರ, ಸಂಗೀತ ವರ್ಣೇಕರ, ಅಶ್ವಿನಿ ರೇವಣಕರ, ಶೋಭಾ ಕುರುಡೇಕರ, ವೀಣಾ ಭಟ್, ನಿರ್ಮಲ ರೇವಣಕರ, ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net