ಮೇವು ತರಲು ಹೋದ ವ್ಯಕ್ತಿ ಹಾವು ಕಚ್ಚಿ ಸಾವು

9-RNR-06 dadakalandar
Published on

ರಾಣೆಬೆನ್ನೂರ: ಹಾವು ಕಚ್ಚಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹನುಮಾಪುರದಲ್ಲಿ ಶುಕ್ರವಾರ ಸಂಭವಿಸಿದೆ.
ದಾದಾಕಲಂದರ ಮೌಲಾಸಾಬ ನದಾಫ್ (45) ಮೃತ ವ್ಯಕ್ತಿ.
ಈತ ಜಮೀನಿನಲ್ಲಿ ಮೇವು ತರಲು ಹೋದ ಸಮಯದಲ್ಲಿ ಹಾವು ಕಚ್ಚಿದೆ. ಇದರಿಂದ ಸ್ಥಳದಲ್ಲಿಯೆ ಮತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net