ನಾಲ್ಕು ಎಚ್​ಎಫ್​ ಹಸುಗಳ ಕಳ್ಳತನ

Crime Logo
Published on

ರಾಣೆಬೆನ್ನೂರ: ಮನೆ ಮುಂಭಾಗದಲ್ಲಿ ಕಟ್ಟಿದ್ದ 1.62 ಲಕ್ಷ ರೂ. ಮೌಲ್ಯದ ನಾಲ್ಕು ಎಚ್​ಎಫ್​ ಹಸುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ಇಲ್ಲಿಯ ಹಲಗೇರಿ ರಸ್ತೆಯ ಜಕಾತಿ ಕಟ್ಟೆಯ ಬಳಿ ಭಾನುವಾರ ರಾತ್ರಿ ನಡೆದಿದೆ.
ಮಂಜುನಾಥ ಜಯಪ್ಪ ಚಪ್ಪರಮನಿ (32) ಎಂಬುವರ ಹಸುಗಳು ಕಳ್ಳತನ ಆಗಿರುವುದು.
ಇವರು ಮನೆ ಮುಂಭಾಗದಲ್ಲಿ ಹಸುಗಳನ್ನು ಕಟ್ಟಿದ್ದರು. ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಹಸುಗಳನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net