ಟ್ರಾೃಕ್ಟರ್ ಪಲ್ಟಿಯಾಗಿ ಚಾಲಕ ಸಾವು

Crime Logo
Published on

ರಾಣೆಬೆನ್ನೂರ: ಕಟ್ಟಿಗೆ ಸಾಗಿಸುತ್ತಿದ್ದ ಟ್ರಾೃಕ್ಟರ್ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಮೇಡ್ಲೇರಿ-ಹಿರೇಬಿದರಿ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ಮೇಡ್ಲೇರಿ ತಾಂಡಾದ ರಾಜಪ್ಪ ಗಣಿಯಪ್ಪ ಲಮಾಣಿ ಮೃತ ವ್ಯಕ್ತಿ.
ಇವರು ಟ್ರಾೃಕ್ಟರ್‌ನಲ್ಲಿ ಕಟ್ಟಿಗೆ ಹೇರಿಸಿಕೊಂಡು ಸಾಗಿಸುತ್ತಿದ್ದ ಸಮಯದಲ್ಲಿ ಮುಂದೆ ತೆರಳುತ್ತಿದ್ದ ಬೈಕ್ ಸವಾರ ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಆತನನ್ನು ತಪ್ಪಿಸಲು ಹೋಗಿ ಟ್ರಾೃಕ್ಟರ್ ಪಲ್ಟಿಯಾಗಿದೆ. ಇದರಿಂದ ಚಾಲಕ ರಾಜಪ್ಪ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net