ಸ್ಕೂಟಿ ಡಿಕ್ಕಿಯಾಗಿ ಪಾದಚಾರಿ ಸಾವು

Crime Logo
Published on

ರಾಣೆಬೆನ್ನೂರ: ಯಾವುದೋ ಸ್ಕೂಟಿ ವಾಹನ ಡಿಕ್ಕಿಯಾಗಿ ಪಾದಚಾರಿ ವೃದ್ಧರೊಬ್ಬರು ಮೃತಪಟ್ಟ ಟನೆ ನಗರದ ತಹಸೀಲ್ದಾರ್​ ಕಚೇರಿ ಎದುರು ಬುಧವಾರ ನಡೆದಿದೆ.
ತಾಲೂಕಿನ ಉಕ್ಕುಂದ ಗ್ರಾಮದ ಆನಂದಪ್ಪ ಬಸಪ್ಪ ಚಲವಾದಿ (78) ಮೃತ ವೃದ್ಧರು.
ಇವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಯಾವುದೋ ಸ್ಕೂಟಿ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net