ಪಾನಕಾರ್ಡ್ ಅಪಡೇಟ್ ಹೆಸರಿನಲ್ಲಿ 25 ಸಾವಿರ ರೂ. ದೋಖಾ

Cibra
Published on

ರಾಣೆಬೆನ್ನೂರ: ಪಾನಕಾರ್ಡ್ ಅಪಡೇಟ್ ಮಾಡಬೇಕಿದೆ ಎಂದು ಹೇಳಿ ವ್ಯಕ್ತಿಯೊಬ್ಬನ ಖಾತೆಯಿಂದ 25 ಸಾವಿರ ರೂ. ಹಾಕಿಸಿಕೊಂಡು ಮೋಸ ಮಾಡಿದ ಘಟನೆ ಕುರಿತು ಇಲ್ಲಿಯ ಗ್ರಾಮೀಣ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಇಲ್ಲಿಯ ಬೀರೇಶ್ವರ ನಗರದ ಬಸವರಾಜ ಹೊಳೆಬಸನಗೌಡ ಪಾಟೀಲ ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ಫೋನ್ ಮಾಡಿದ ವ್ಯಕ್ತಿಯೊಬ್ಬ ಐಪಿಪಿಬಿ ಹೆಸರು ಹೇಳಿಕೊಂಡು ಪಾನಕಾರ್ಡ್ ಅಪಡೇಟ್ ಮಾಡಬೇಕಿದೆ. ಆದ್ದರಿಂದ ನಿಮ್ಮ ಪೋಸ್ಟ್ ಆಫೀಸ್‌ನ ಮಾಹಿತಿ ಕೊಡಿ ಎಂದು ಪೋಸ್ಟ್ ಆಫೀಸ್‌ನ ಖಾತೆಯ ಮಾಹಿತಿ ಪಡೆದುಕೊಂಡಿದ್ದಾನೆ. ನಂತರ ಅದರಿಂದ 25 ಸಾವಿರ ರೂ. ಹಣವನ್ನು ಇಂಟರನೆಟ್ ಬ್ಯಾಂಕಿಂಗ್ ಮೂಲಕ ಬೇರೆ ಯಾವುದೊ ಖಾತೆಗೆ ವರ್ಗಾಹಣೆ ಮಾಡಿಕೊಂಡು ಮೋಸ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net