

ರಾಣೆಬೆನ್ನೂರ: ಅಂಗಡಿಯಲ್ಲಿಟ್ಟಿದ್ದ 87 ಲಕ್ಷ ರೂ. ಮೌಲ್ಯದ ಆರ್‌ಎಂಡಿ ಪ್ಯಾಕೇಟ್‌ಅನ್ನು ಅಂಗಡಿಯ ಸೆಟ್ರೆಸ್ ಮುರಿದು ದೋಚಿದ ಘಟನೆ ಇಲ್ಲಿಯ ನೆಹರು ಮಾರುಕಟ್ಟೆಯಲ್ಲಿ ಗುರುವಾರ ರಾತ್ರಿ ನಡೆದಿದ್ದು, ಶುಕ್ರವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ನಗರದ ವ್ಯಾಪಾರಿ ವಾಗೀಶ ಗುಪ್ತಾ ಎಂಬುವರ ಅಂಗಡಿ ಕಳ್ಳತನವಾಗಿರುವುದು.
ಇವರು ಅಂಗಡಿಯಲ್ಲಿ 87 ಲಕ್ಷ ರೂ. ಮೌಲ್ಯದ ಆರ್‌ಎಂಡಿ ಬಾಕ್ಸ್‌ಗಳನ್ನು ಇಟ್ಟಿದ್ದರು. ಈ ಕುರಿತು ಹೊಂಚು ಹಾಕಿದ ಖದೀಮರು ರಾತ್ರೋರಾತ್ರಿ ಅಂಗಡಿಯ ಸೆಟ್ರೆಸ್ ಮುರಿದು ದೋಚಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.