ಟ್ರ್ಯಾಕ್ಟರ್ ಪಲ್ಟಿ ಮಾಡಿ ಮಹಿಳೆ ಸಾವಿಗೆ ಕಾರಣವಾದ ಅಪರಾಧಿಗೆ ಜೈಲು ಶಿಕ್ಷೆ

Published on

ರಾಣೆಬೆನ್ನೂರ: ಟ್ರ್ಯಾಕ್ಟರ್ ಮಾಡಿಸಿ ಅದರಲ್ಲಿ ಓರ್ವ ಮಹಿಳೆ ಸಾವಿಗೆ ಕಾರಣವಾದ ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 9 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ 1ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಿ. ಸಿದ್ಧರಾಜು ಸೋಮವಾರ ತೀರ್ಪು ನೀಡಿ ಆದೇಶಿಸಿದ್ದಾರೆ.
ಶಿಕಾರಿಪುರ ತಾಲೂಕಿನ ಚನ್ನಳ್ಳಿ ಗ್ರಾಮದ ಗುತ್ತೆಪ್ಪ ಕರಿಯಪ್ಪ ಉದಗಣಿ ಶಿಕ್ಷೆಗೊಳಗಾದ ಅಪರಾಧಿ.
ಈತ 2020 ಮಾರ್ಚ್ 9ರಂದು ಹಲಗೇರಿ ಗ್ರಾಮದ ಬಳಿ ಟ್ರ್ಯಾಕ್ಟರ್ ಟ್ರೈಲರ್‌ನಲ್ಲಿ 15 ಜನರನ್ನು ಕುಂದರಿಸಿಕೊಂಡು ಹೋಗುತ್ತಿದ್ದ ಸಮಯದಲ್ಲಿ ಟ್ರ್ಯಾಕ್ಟರ್ ಪಲ್ಟಿ ಮಾಡಿ ಅದರಲ್ಲಿದ್ದ ಕರಬಸಮ್ಮ ಗಂಗಪ್ಪ ಅಡಗಂಟಿ ಎಂಬುವರು ಮೃತಪಡುವಂತೆ ಮಾಡಿದ್ದ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಾಕ್ಷಾೃಧಾರ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಧುಮತಿ ಸಿದ್ನೂರಕರ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net