ಹುಣಸೆಮರಕ್ಕೆ ಕಾರು ಡಿಕ್ಕಿ, ಶಿರಸಿಯ ಇಬ್ಬರು ಸ್ಥಳದಲ್ಲಿಯೇ ಸಾವು

18-RNR-06
Published on

ರಾಣೆಬೆನ್ನೂರ: ರಸ್ತೆ ಬದಿಯ ಹುಣಸೆಮರಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ಇಟಗಿ-ತೆರದಹಳ್ಳಿ ನಡುವೆ ಮಂಗಳವಾರ ನಡೆದಿದೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹುಲೇಕಲ್ಲ ಗ್ರಾಮದ ವಿಠ್ಠಲ ಗಣಪತೆಪ್ಪ ದೈವಜ್ಞ (47) ಹಾಗೂ ಜಯಂತಿ ದಿನೇಶ ದೈವಜ್ಞ (50) ಮೃತ ದುರ್ದೈವಿಗಳು.
ಇವರು ಬೆಂಗಳೂರಿನಿಂದ ಶಿರಸಿಗೆ ತೆರಳುತ್ತಿದ್ದರು. ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಹುಣಸೆಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net