ಬೈಕ್‌ಗೆ ಕ್ಯಾಂಟರ್ ಲಾರಿ ಡಿಕ್ಕಿ; ಮಹಿಳೆ ಸಾವು

Bike Accident
Published on

ರಾಣೆಬೆನ್ನೂರ: ಕ್ಯಾಂಟರ್ ಲಾರಿಯೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತ್ತಿದ್ದ ಮಹಿಳೆ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ಹಲಗೇರಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.
ಹಿರೇಕೆರೂರ ತಾಲೂಕಿನ ಬಾವಾಪುರ ತಾಂಡಾದ ದೇವೀರಮ್ಮ ಪೀರಪ್ಪ ಲಮಾಣಿ (43) ಮೃತ ಮಹಿಳೆ. ಈಕೆಯ ಪತಿ ಪೀರಪ್ಪನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಹಲಗೇರಿ ಕಡೆಯಿಂದ ಹಿರೇಕೆರೂರ ಹೊರಟಿದ್ದರು. ದಾರಿ ಮಧ್ಯೆ ಕ್ಯಾಂಟರ್ ಲಾರಿ ಬಂದು ಡಿಕ್ಕಿ ಪಡೆದ ಪರಿಣಾಮ ದೇವೀರಮ್ಮ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net