ರಾಣೆಬೆನ್ನೂರಿನಲ್ಲಿ ಅಮಿತ್ ಷಾ ರೋಡ್ ಶೋ ಮೇ 1ರಂದು

images
Published on


ರಾಣೆಬೆನ್ನೂರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಮೇ 1ರಂದು ನಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರವಾಗಿ ಮತಯಾಚನೆ ಮಾಡಲಿದ್ದಾರೆ.
ಇಂದು ಸಂಜೆ 4 ಗಂಟೆಗೆ ನಗರಕ್ಕೆ ಬರಲಿರುವ ಅಮಿತ್ ಷಾ ಕುರುಬಗೇರಿ ಕ್ರಾಸ್‌ನಿಂದ ರೋಡ್ ಶೋ ಆರಂಭಿಸಲಿದ್ದಾರೆ. ಅಲ್ಲಿಂದ ದುರ್ಗಾ ವೃತ್ತ, ಎಂ.ಜಿ. ರಸ್ತೆ, ಪೋಸ್ಟ್ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಶೋಕ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net