

ಮೈಸೂರು: ನಾದರಂಗ ರಂಗ ವೇದಿಕೆಯು ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ಆಯೋಜಿಸಿರುವ ನಾಟಕೋತ್ಸವದಲ್ಲಿ ಡಿ.28ರಂದು ಸಂಜೆ 7 ಗಂಟೆಗೆ ಸಿ.ವಿ.ಶಿವಶಂಕರ್ ವಿರಚಿತ ‘ರಣ ಪ್ರಚಂಡ’ ಐತಿಹಾಸಿಕ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ರಂಗಸ್ವಾಮಿ ನಿರ್ದೇಶನ ಮಾಡಿದ್ದು, ಡಿ.ಕೃಷ್ಣಮೂರ್ತಿ ರಂಗ ನಿರ್ವಹಣೆ ಮಾಡಿದ್ದಾರೆ. ಪಾಟೀಲ್, ಎಂ.ಸಿ.ಜಗದೀಶ್, ಮಹದೇವ್ ಅವರು ಸಂಗೀತ, ಬಿ.ಎಂ.ರಾಮಚಂದ್ರ ಅವರು ವಸ್ತ್ರಾಲಂಕಾರ, ನರಸಿಂಹಕುಮಾರ್ ರಂಗಸಜ್ಜಿಕೆ, ಮಧು ಮಳವಳ್ಳಿ ಬೆಳಕಿನ ಜವಾಬ್ದಾರಿ ಹೊತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.