21 ಗ್ರಾಂ ಚಿನ್ನದ ಚೈನ್ ಕಿತ್ತುಕೊಂಡು ಪರಾರಿ

crime
Published on

ಹುಬ್ಬಳ್ಳಿ: ಉಡುಪಿಯಿಂದ ಶಿರಕೋಳ ಗ್ರಾಮಕ್ಕೆ ಹೋರಡುತಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಆಟೋರಿಕ್ಷಾ ಚಾಲಕನೊಬ್ಬ, 21 ಗ್ರಾಂ ಚಿನ್ನದ ಚೈನ್ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.

ಕಲ್ಲಪ್ಪ ಸಂಗೊಳ್ಳಿ ಎಂಬಾತನ ಚೈನ್ ಕಳೆದುಕೊಂಡವರು. ಕಲ್ಲಪ್ಪ ಅವರು ಬೆಳಗ್ಗೆ 6 ಗಂಟೆಗೆ ಉಡುಪಿಯಿಂದ ಹಳೇಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಶಿರಕೋಳಕ್ಕೆ ಹೋಗಲು ಧಾರವಾಡದವರೆಗೆ ಆಟೋರಿಕ್ಷಾ ಬಾಡಿಗೆ ಕೇಳಿದ್ದಾರೆ. ಆಟೋರಿಕ್ಷಾ ಹತ್ತಿದ ತಕ್ಷಣ ವರೂರು ಸೇರಿದಂತೆ ವಿವಿಧೆಡೆ ಸುತ್ತಾಡಿಸಿದ ಚಾಲಕ, ಅಲ್ಲಿಂದ ಕಾರವಾರ ರಸ್ತೆಯ ಗಿರಣಿಚಾಳ ಹತ್ತಿರ ಕರೆದುಕೊಂಡು ಬಂದು ಹಲ್ಲೆ ಮಾಡಿದ್ದಾನೆ. 1.40 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಆಟೋರಿಕ್ಷಾ ಚಾಲಕ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net