ಅಧ್ಯಕ್ಷರಾಗಿ ರಮ್ಯಾ ರಮೇಶ್ ಆಯ್ಕೆ

ramya ramesh
ರಮ್ಯಾ ರಮೇಶ್ ಆಚಾರ್ಯ
Published on

ಕೋಟ: ಸಾಲಿಗ್ರಾಮ ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಅಂಗ ಸಂಸ್ಥೆ ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷರಾಗಿ ರಮ್ಯಾ ರಮೇಶ್ ಆಚಾರ್ಯ ಚೇಂಪಿ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಸವಿತಾ ಚಂದ್ರಶೇಖರ್ ಆಚಾರ್ಯ, ಉಪಾಧ್ಯಕ್ಷರಾಗಿ ಸರಿತಾ ಚಂದ್ರ ಆಚಾರ್ಯ ಕಾರ್ಕಡ, ಕಾರ್ಯದರ್ಶಿ ಸಹನಾ ರಾಘವೇಂದ್ರ ಆಚಾರ್ಯ ಪಾರಂಪಳ್ಳಿ, ಜತೆ ಕಾರ್ಯದರ್ಶಿ ಪುಷ್ಪಾ ಶ್ರೀಕಾಂತ್ ಆಚಾರ್ಯ ಪಾರಂಪಳ್ಳಿ, ಕೋಶಾಧಿಕಾರಿ ಸುಶೀಲಾ ಸತೀಶ್ ಆಚಾರ್ಯ ಸಾಲಿಗ್ರಾಮ, ಕ್ರೀಡಾ ಕಾರ್ಯದರ್ಶಿ ಭಾರತಿ ಕೃಷ್ಣಯ್ಯ ಆಚಾರ್ಯ ಗುಂಡ್ಮಿ, ಮಾಲತಿ ಉದಯ ಆಚಾರ್ಯ ಐರೋಡಿ ಹಾಗೂ ಸಂಘದ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಗ್ರಾಮವಾರು ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಜನಾರ್ದನ್ ಆಚಾರ್ಯ, ವಿಶ್ವಕರ್ಮ ಕಲಾ ವೃಂದದ ಅಧ್ಯಕ್ಷ ವೆಂಕಟೇಶ್ ಆಚಾರ್ಯ, ವಿಶ್ವಜ್ಯೋತಿ ಮಹಿಳಾ ಬಳಗದ ನಿಕಟಪೂರ್ವ ಅಧ್ಯಕ್ಷ ಸವಿತಾ ಚಂದ್ರಶೇಖರ್ ಆಚಾರ್ಯ, ಕಾರ್ಯದರ್ಶಿ ವಾಣಿ ಸುರೇಶ ಆಚಾರ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net