ರಮ್ಯಾ ಕದಂ ವೈಯಕ್ತಿಕ ವೀರಾಗ್ರಣಿ

Ramya Kadam is a personal hero
ಜಿಲ್ಲಾ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದ ವಿಜಯಪುರದ ಡಿ.ಎನ್. ದರಬಾರ ಪ್ರೌಢಶಾಲೆಯ ವಿದ್ಯಾರ್ಥಿನಿಯರೊಂದಿಗೆ ಸಂಘದ ಅಧ್ಯಕ್ಷ ರಾಜೇಶ ದರಬಾರ, ಡಾ. ವಿ.ಬಿ. ಗ್ರಾಮಪುರೋಹಿತ, ಜಿ. ಕೆ. ಲಮಾಣಿ ಮತ್ತಿತರರಿದ್ದಾರೆ.
Published on

ವಿಜಯಪುರ : ನಗರದ ಡಿ.ಎನ್. ದರಬಾರ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದಿದ್ದಾರೆ.

ಶಾಲೆಯ ರಮ್ಯಾ ಕದಂ 200 ಮೀ, 400 ಮೀ ಮತ್ತು 400 ಮೀ ರೀಲೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪಾತ್ರರಾಗಿದ್ದಾಳೆ. ವೈಶಾಲಿ ಕಲಾದಗಿ 100 ಮೀ ಅಡತಡೆ ಓಟದಲ್ಲಿ ಪ್ರಥಮ ಸ್ಥಾನ , ಐಶ್ವರ್ಯ ಚವಾಣ 100 ಮೀ ಅಡತಡೆ ಓಟದಲ್ಲಿ ದ್ವಿತೀಯ ಸ್ಥಾನ, ಪ್ರಿಯಂಕಾ ರಾಠೋಡ, ಸಂಜನಾ ಮಣೂರ, ಲಕ್ಷ್ಮೀ ಚವಾಣ ಮತ್ತು ಸಾವಿತ್ರಿ ಚವಾಣ ವಿದ್ಯಾರ್ಥಿನಿಯರು 4*100 ಮೀ ರೀಲೆಯಲ್ಲಿ ಪ್ರಥಮ ಸ್ಥಾನ, ಸಂಜನಾ ರಜಪೂತ, ದೀಪಾ ಪವಾರ, ಪ್ರಿಯಾ ಅಂಕಲಗಿ, ಮಹೇಶ್ವರಿ ಜಾಧವ ವಿದ್ಯಾರ್ಥಿನಿಯರು 4*400 ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದು 11 ವಿದ್ಯಾರ್ಥಿನಿಯರ ತಂಡ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿಯರಿಗೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಜೇಶ ದರಬಾರ, ಗೌರವ ಕಾರ್ಯದರ್ಶಿ ಪ್ರಕಾಶ ಉಡುಪಿಕರ ಹಾಗೂ ಸಮನ್ವಯಾಧಿಕಾರಿ ಡಾ. ವಿ.ಬಿ. ಗ್ರಾಮಪುರೋಹಿತ, ಮುಖ್ಯ ಗುರುಮಾತೆ ಸು.ಚಿ. ಮಮದಾಪೂರ, ದೈಹಿಕ ಶಿಕ್ಷಣದ ನಿರ್ದೇಶಕ ಜಿ. ಕೆ. ಲಮಾಣಿ, ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net