ಜ.22ರಂದು ನಗರದಲ್ಲಿ ರಾಮೋತ್ಸವ: ಆಚರಣಾ ಸಮಿತಿಯ ಸಂಚಾಲಕ ಎಂ.ಬಿ.ರಮೇಶ್ ಹೇಳಿಕೆ

Ramotsava press conference mandya
Published on

ಮಂಡ್ಯ: ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಅಂಗವಾಗಿ ಜ.22ರಂದು ನಗರದ ವಿನೋಬಾ ರಸ್ತೆಯ ಕೆ.ಇ.ಬಿ ಕ್ವಾರ್ಟಸ್ ಆವರಣದಲ್ಲಿರುವ ಶ್ರೀರಾಮ ಮಂದಿರದಲ್ಲಿ ರಾಮೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಆಚರಣಾ ಸಮಿತಿ ಸಂಚಾಲಕ ಎಂ.ಬಿ.ರಮೇಶ್ ತಿಳಿಸಿದರು.

ಅಂದು ಬೆಳಗ್ಗೆ 9.30ರಿಂದ 11ರವರೆಗೆ ನಗರದ ಜೆ.ಸಿ ವೃತ್ತ, ಮಹಾವೀರ ವೃತ್ತ, ಹೊಸಹಳ್ಳಿ ವೃತ್ತ ಮಾರ್ಗವಾಗಿ ವಿನೋಬಾ ರಸ್ತೆಯ ಮೂಲಕ ಸಾಗಿ ಶ್ರೀರಾಮ ಮಂದಿರದವರೆಗೆ ಬೈಕ್ ರ‌್ಯಾಲಿ ಹಾಗೂ 11 ಗಂಟೆಗೆ ಹೋಮ ಪೂಜೆ ನಡೆಯಲಿದೆ. ಬಳಿಕ ಮಹಾಮಂಗಳಾರತಿ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಹಾಮಂಗಳಾರತಿ ನಂತರ 1,500ಕ್ಕೂ ಹೆಚ್ಚು ಜನರಿಗೆ ಪ್ರಸಾದ ವಿನಿಯೋಗ, ಮೂರು ಸಾವಿರಕ್ಕೂ ಹೆಚ್ಚು ಲಾಡು ವಿತರಿಸಲಾಗುವುದು. ಸಂಜೆ 5 ಗಂಟೆಗೆ ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ರಾಮಾಯಣ ಪ್ರವಚನ ನೀಡಲಿದ್ದು, ನೇತ್ರಾವತಿ ಗಾಯನ ನಡೆಸಿಕೊಡಲಿದ್ದಾರೆ. ಸಂಜೆ 6.30ಕ್ಕೆ ದೀಪೋತ್ಸವ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಸಮಿತಿಯ ಕಾರ್ಯಾಧ್ಯಕ್ಷ ರಾಘವೇಂದ್ರ, ಮುಖಂಡರಾದ ರೋಹಿತ್, ದೀಪಕ್, ಸಚ್ಚಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net