

ಗದಗ: ಪ್ರತ್ಯೇಕ ದಕ್ಷಿಣ ಭಾರತದ ಬೇಡಿಕೆ ಇಟ್ಟ ಸಂಸದ ಡಿ.ಕೆ. ಸುರೇಶ್ ಹೇಳಿಕೆ ವಿಚಾರವಾಗಿ ಗದಗ ನಲ್ಲಿ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು, ದಕ್ಷಿಣ ಭಾಗದ ಐದು ರಾಜ್ಯಗಳಿಗೆ ಬಜೆಟ್ನಲ್ಲಿ ಅನುದಾನ ತಾರತಮ್ಯ ಮಾಡಿದ್ದರಿಂದ ಡಿ.ಕೆ. ಸುರೇಶ್ ಅವರಿಗೆ ನೋವಾಗಿದೆ. ಹಾಗಾಗಿ ನೋವಿನಿಂದ ಹಾಗೆ ಮತನಾಡಿದ್ದಾರೆ. ಬಜೆಟ್ನಲ್ಲಿ ದಣ ಭಾರತದ 5 ರಾಜ್ಯಗಳಿಗೆ ಕೇವಲ 1.8 ಲಕ್ಷ ಕೋಟಿ ಕೇಂದ್ರ ಸರ್ಕಾರ ನೀಡಿದೆ. ಆದರೆ, ಉತ್ತರ ಪ್ರದೇಶ ಒಂದೇ ರಾಜ್ಯಕ್ಕೆ 2 ಲಕ್ಷ ಕೋಟಿ ನೀಡಿದೆ. ಈ ತಾರತಮ್ಯ ಏತಕ್ಕೆ? ಎಂದು ಪ್ರಶ್ನಿಸಿದರು.
ಕರ್ನಾಟಕದಿಂದ 4 ಲಕ್ಷ ಕೋಟಿ ಜಿಎಸ್ ಟಿ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಆದರೆ, ಬಜೆಟ್ ನಲ್ಲಿ ಕೇವಲ 50 ಸಾವಿರ ಕೋಟಿ ಮಾತ್ರ ಕರ್ನಾಟಕಕ್ಕೆ ಮೀಸಲಿಟ್ಟಿದ್ದಾರೆ. ದೇಶ ಅಖಂಡವಾಗಿಯೇ ಇರಬೇಕು. ಆದರೆ ನಮಗೆ ಕೊಡಬೇಕಾಗಿದ್ದನ್ನು ಕೊಡಲೇಬೇಕು. ರಾಜ್ಯದ 123 ತಾಲೂಕಿನಲ್ಲಿ ಬರಗಾಲ ಘೋಷಣೆ ಮಾಡಿದ್ದರೂ, ಕೇಂದ್ರದಿಂದ ಒಂದು ಕಾಸು ಬಿಡಿಗಾಸು ಬಂದಿಲ್ಲ. ಮಲತಾಯಿ ಧೋರಣೆ ಧೊರಣೆಯಿಂದ ಡಿ.ಕೆ. ಸುರೇಶ್ ಹೇಳಿದ್ದಾರೆ ಎಂದು ರಾಮಲಿಂಗ ರೆಡ್ಡಿ ಹೇಳಿದರು.