ರಾಮಲೀಲಾ ಕಾರ್ಯಕ್ರಮ

22 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಜಯದಶಮಿ ನಿಮಿತ್ತ ನಂದಗೋಕುಲ ಸ್ವಯಂ ಸೇವಾ ಸಂಸ್ಥೆ ಹಾಗೂ ವಿಜಯದಶಮಿ, ಸಾಂಸ್ಕೃತಿಕ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ಅ. 24ರಂದು ಸಂಜೆ 5.30ಕ್ಕೆ ಇಲ್ಲಿನ ಕೆಸಿಡಿ ಮೈದಾನದಲ್ಲಿ ಸಾಂಸ್ಕೃತಿಕ ಹಾಗೂ ರಾಮಲೀಲಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಂಜಯ ಕಪಟಕರ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮಾಜಿ ಮೇಯರ್ ಈರೇಶ ಅಂಚಟಗೇರಿ ಆಗಮಿಸಲಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದರು.
ದುಷ್ಟರ ಸಂಹಾರದ ಪ್ರತೀಕವೇ ಈ ರಾಮಲೀಲಾ ಕಾರ್ಯಕ್ರಮ. ಮೊದಲ ದಿನಗಳಲ್ಲಿ ಕೇವಲ ರಾವಣ ದಹನ ಮಾತ್ರ ನಡೆಯುತ್ತಿತ್ತು. ಈ ಬಾರಿ ಇದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸಹ ನಡೆಯಲಿದ್ದು, ಗಾಯಕ ರಾಜೇಶ ಕೃಷ್ಣನ್ ಹಾಗೂ ತಂಡದವರು ಸಂಗೀತ ರಸದೌತಣ ನೀಡಲಿದ್ದಾರೆ ಎಂದರು.
ರಾಜು ಕಿಲಾರ, ವಿಜಯಾನಂದ ಶಟ್ಟಿ, ಮೋಹನ ರಾಮದುರ್ಗ, ಶಂಕರ ಶೇಳಕೆ, ಸುನೀಲ ಮೋರೆ, ರಾಕೇಶ ನಾಝರೆ, ಮಂಜುನಾಥ ನೀರಲಕಟ್ಟಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net