

ಕಳಸ: ಕಳಸ ಪ್ರಬೋಧಿನಿ ವಿದ್ಯಾಕೇಂದ್ರದ ಕಾರ್ಯದರ್ಶಿ ಪಿ.ಡಿ ರಾಘವೇಂದ್ರ ಭಟ್‌ಗೆ ಶೈಕ್ಷಣಿಕ ಶ್ರೇಷ್ಠತೆಗಾಗಿ ಶ್ರೀರಾಮಸೇವಾ ಪ್ರತಿಷ್ಠಾನ ಹನುಮಾನ್ ಗುಪ್ತಾ ಅಯೋಧ್ಯೆಯಿಂದ ರಾಮಲಲ್ಲಾ ಪುರಸ್ಕಾರ ನೀಡಲಾಗಿದೆ.
ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರ ಕನ್ನಡ ಮಾಧ್ಯಮದಲ್ಲಿ 20 ವರ್ಷಗಳಿಂದ ಶೇ100 ಲಿತಾಂಶ ನೀಡುತ್ತಿದೆ. 2025ನೇ ಶೈಕ್ಷಣಿಕ ವರ್ಷದಿಂದ ಇದೇ ಶಾಲೆಯಲ್ಲಿ ಆಂಗ್ಲ ಮಾಧ್ಯಮ ನಡೆಸಲಾಗುತ್ತದೆ. 30 ವರ್ಷಗಳಿಂದ ಭಾರತೀಯ ಸಂಸ್ಕಾರ ಸಂಸ್ಕೃತಿಯನ್ನು ಒಳಗೊಂಡು ನೀಡುತ್ತಿರುವ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಶೈಕ್ಷಣಿಕ ಶ್ರೇಷ್ಠತೆಗಾಗಿ ಈ ರಾಮಲಲ್ಲಾ ಪುರಸ್ಕಾರ ನೀಡಲಾಗಿದೆ.