

ಹಲಗೂರು:- ಹಲಗೂರು ಸೇರಿದಂತೆ ಧನಗೂರು, ಹಾಡ್ಲಿ, ಹುಸ್ಕೂರು, ನಿಟ್ಟೂರು ಗ್ರಾಮದಲ್ಲಿ ಸೋಮವಾರ ರಂಜಾನ್
ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಹಬ್ಬಕ್ಕೆ ಮೊದಲು ಒಂದು ತಿಂಗಳು ಚಿಕ್ಕ ಮಕ್ಕಳು ವಯಸ್ಸಾದವರು ಎಲ್ಲರೂ ಸೇರಿದಂತೆ ಒಂದು ದಿನಕ್ಕೆ ಐದು ಬಾರಿ ನಮಾಜ್ ಸಲ್ಲಿಸಿ ಉಪವಾಸ ಇದ್ದು ತಿಂಗಳ ಕೊನೆಯ ದಿನವಾದ ಸೋಮವಾರ ರಂಜಾನ್ ಅನ್ನು ಹೊಸ ಬಟ್ಟೆಗಳನ್ನು ಧರಿಸುವ ಮೂಲಕ ಸಡಗರದಿಂದ ಆಚರಿಸಿ, ನಂತರ ಉಪವಾಸವನ್ನು ಕೈ ಬಿಡಲಾಯಿತು.ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.