ಉನ್ನತ ಶಿಕ್ಷಣ ಸಚಿವರು ಕ್ಷಮೆ ಯಾಚಿಸಲಿ - ಮಂಗಳೂರು ವಿ.ವಿ. ಸಿಂಡಿಕೇಟಿನ ಮಾಜಿ ಸದಸ್ಯ ರಮೇಶ ಕೆ. ಆಗ್ರಹ

eeeeeeeeeeeeeeeeee
Published on


ಮಂಗಳೂರು : ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆ ಬಂದಿರುವುದು ಖಂಡನೀಯ. ಈ ಅವಾಂತರಗಳಿಗೆ ಸಂಬಂಧಿಸಿದಂತೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ ವಿದ್ಯಾರ್ಥಿಗಳಲ್ಲಿ ಬಹಿರಂಗ ಕ್ಷಮೆಯಾಚಿಸಬೇಕೆಂದು ಮಂಗಳೂರು ವಿ.ವಿ. ಸಿಂಡಿಕೇಟಿನ ಮಾಜಿ ಸದಸ್ಯ ರಮೇಶ ಕೆ. ಆಗ್ರಹಿಸಿದ್ದಾರೆ.
ಭೌತಶಾಸ್ತ್ರ 10 ಪ್ರಶ್ನೆ, ರಸಾಯನ ಶಾಸ್ತ್ರ 15, ಜೀವಶಾಸ್ತ್ರ 10, ಗಣಿತ 11 ಒಟ್ಟು 46 ಪ್ರಶ್ನೆಗಳು ನಿಗದಿತ ಪಠ್ಯದಿಂದಾಚೆಗೆ ನೀಡಲಾಗಿದೆ. ಬಡ ಪ್ರತಿಭಾನ್ವಿತ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪಪೂ ಕಾಲೇಜಿನ ಸುಮಾರು 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆತಂಕದಲ್ಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಬೇಕೆಂದು ತಿಳಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಸಿಇಟಿಗೋಸ್ಕರ ತಯಾರಿ ನಡೆಸಿರುವುದರಿಂದ ಅವರ ಗೊಂದಲ ನಿವಾರಿಸಿ ಫಲಿತಾಂಶದ ಬಗ್ಗೆ ಸರಿಯಾದ ನಿರ್ಧಾರವನ್ನು ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net