ರಮೇಶ್ ಜಾರಕಿಹೊಳಿಗೆ ಈ ವಿಚಾರಕ್ಕೆ ಹೆಚ್ಚು ಬೇಸರವಂತೆ...

ramesh
Published on

ಬೆಂಗಳೂರು: ಸಿಡಿ ಪ್ರಕರಣದಿಂದ ಮುಜುಗರಕ್ಕೆ ಸಿಲುಕಿರುವ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕಳೆದುಕೊಂಡಿದ್ದಕ್ಕಿಂತ ಇನ್ನೊಂದು ವಿಚಾರದಲ್ಲಿ ಹೆಚ್ಚು ಬೇಸರವಾಗಿದೆಯಂತೆ.

ತನ್ನ ಆಪ್ತರೊಂದಿಗೆ ಸಭೆ ನಡೆಸಿದ ರಮೇಶ್, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ, ಅದು ಫೇಕ್ ವಿಡಿಯೋ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ, ತನಗೆ ನೈತಿಕವಾಗಿ ಬೆಂಬಲಿಸಿದ ಸಿಎಂ ಬಿಎಸ್ವೈ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು  ಸ್ಮರಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಕುಟುಂಬಕ್ಕೆ ತಮ್ಮಿಂದಾದ ಹಾನಿಯ ಬಗ್ಗೆಯೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿರಿ ಸಿಐಡಿಗೆ ಸಿಡಿ ಕೇಸ್​! ಷಡ್ಯಂತ್ರ ಮಾಡಿದ್ದವರನ್ನ ಜೈಲಿಗೆ ಕಳಿಸೋದೇ ನನ್ನ ಗುರಿ: ಜಾರಕಿಹೊಳಿ

ಈ ವಿಚಾರವನ್ನು ಸುದ್ದಿಗಾರರಿಗೆ ತಿಳಿಸಿದ ಶಾಸಕ‌ ಮಹೇಶ್ ಕಮಟಳ್ಳಿ, ತನ್ನಿಂದ ಮನೆತನದ ಗೌರವಕ್ಕೆ ಧಕ್ಕೆಯಾಯಿತು ಎಂಬ ಬಹಳ ಬೇಸರ ಅವರಲ್ಲಿದೆ. ರಾಜಕೀಯ ಇರುತ್ತೆ, ಹೋಗುತ್ತದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು ಎಂದರು.

ನಾವು ಕಳೆದ ಒಂದು ವಾರದಿಂದ ಭೇಟಿ ಆಗಿರಲಿಲ್ಲ. ಪ್ರತ್ಯಕ್ಷ ವಾಗಿ ಅಥವಾ ಫೋನ್​ನಲ್ಲಿ ಭೇಟಿ ಆಗಿರಲಿಲ್ಲ. ಮಾಧ್ಯಮದಲ್ಲಿ ಪರ ವಿರೋಧ ವಿಶ್ಲೇಷಣೆ ನೋಡಿ ಮಾತನಾಡುತ್ತಿದ್ದೆವು. ಆದರೆ ಈಗ ಭೇಟಿ ಮಾಡಿ ಅವರೊಂದಿಗೆ ವಾಸ್ತವ ವಿಚಾರ ತಿಳಿದುಕೊಂಡೆವು. ನಿನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದೆವು. ನಾವ್ಯಾರು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲ. ಬಾಲಚಂದ್ರ ಅಥವಾ ರಮೇಶ್‌ಗೆ ಸಚಿವ ಸ್ಥಾನ ಕೊಡಿ ಎಂದಿದ್ದೇವೆ ಎಂದುಮಹೇಶ್ ಕಮಟಳ್ಳಿ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net