

ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಯುವತಿ ಅಜ್ಜನ ಮನೆಗೆ ನೋಟಿಸ್ ಅಂಟಿಸಿದ್ದಾರೆ.
ಸಿಡಿಯಲ್ಲಿರುವ ಮಹಿಳೆಯ ಅಜ್ಜ ಎನ್ನಲಾದ ನಿಡಗುಂದಿಯ ನಿವಾಸಿಯೊಬ್ಬರ ಮನೆ ಬಾಗಿಲಿಗೆ ಭಾನುವಾರ ಮಧ್ಯಾಹ್ನ
ನೋಟಿಸ್ ಅಂಟಿಸಲಾಗಿದೆ.
ಸಿಡಿಯಲ್ಲಿರುವ ಮಹಿಳೆ ಬಸವನಬಾಗೇವಾಡಿಯ ನಿಡಗುಂದಿ ಗ್ರಾಮದವಳೆನ್ನಲಾಗಿದ್ದು ಕಳೆದ ಆರೇಳು ತಿಂಗಳಿಂದ ಗ್ರಾಮ ತೊರೆದಿದ್ದಾರೆ. ಸದ್ಯ ನಿಡುಗುಂದಿಯ ಹಳೇ ಗ್ರಾಮದಲ್ಲಿರುವ ಆಕೆಯ ಅಜ್ಜನ ಮನೆಗೆ ಪೊಲೀಸರು ನೋಟಿಸ್ ಅಂಟಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಬಾಗಿಲಿಗೆ ನೋಟಿಸ್ ಅಂಟಿಸಿದ್ದು ಇದೀಗ ಕುತೂಹಲದ ಕೇಂದ್ರಬಿಂದುವಾಗಿದೆ.
ನೋಟಿಸ್ ನಲ್ಲ ಏನಿದೆ?
ಮಾರ್ಚ್ 2 ರಂದು ದಿನೇಶ ಕಲ್ಲಹಳ್ಳಿ ಎಂಬುವರು ಠಾಣೆಗೆ ದೂರು ನೀಡಿದ್ದು ತನ್ನಿಮಿತ್ತ ವಿಚಾರಣೆ ಕೈಗೊಳ್ಳುವ ಅವಶ್ಯಕತೆ ಇದೆ. ಹೀಗಾಗಿ ನೋಟಿಸ್ ತಲುಪಿದ ತಕ್ಷಣ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ.