ಸಿಡಿ ಪ್ರಕರಣ: ಆಡಗೋಡಿ ಟೆಕ್ನಿಕಲ್ ಸೆಂಟರ್‌ನಲ್ಲಿ ಪೊಲೀಸ್ ಬಂದೋಬಸ್ತ್

court-cd case
Published on

ಬೆಂಗಳೂರು: ಸಿಡಿ ಲೇಡಿ ಬುಧವಾರ ವಿಚಾರಣೆಗೆ ಹಾಜರಾಗುವ ಹಿನ್ನೆಲೆಯಲ್ಲಿ ಆಡುಗೋಡಿ ತಾಂತ್ರಿಕ ವಿಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಯುವತಿಯು ಮಂಗಳವಾರ ರಾತ್ರಿ ಪರಿಚಿತ ಸ್ನೇಹಿತೆ ಮಹಿಳಾ ಲಾಯರ‌ವೊಬ್ಬ ಮನೆಯಲ್ಲಿ ನೆಲೆಸಿದ್ದಳು. ಪೊಲೀಸ್ ಭದ್ರತೆಯಲ್ಲೇ ಯುವತಿಯನ್ನು ಆಕೆ ವಾಸಿಸುವ ಮನೆಗೆ ಬಿಡಲಾಗಿದೆ. ಇದೀಗ ಮತ್ತೆ ಪೊಲೀಸ್ ಭದ್ರತೆಯಲ್ಲೇ ಆಕೆಯ ವಕೀಲರ ಸಮ್ಮುಖದಲ್ಲಿ ಯುವತಿಯನ್ನು ಆಡುಗೋಡಿಗೆ ಕರೆತರುವ ಸಾಧ್ಯತೆಗಳಿವೆ.

ಯುವತಿ ಭದ್ರತೆಗಾಗಿ 8 ಮಹಿಳಾ ಪೊಲೀಸರ ತಂಡ ರಚಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಆಗುವವರೆಗೆ ನಮ್ಮ ರಕ್ಷಣೆಯಲ್ಲಿರಬೇಕು. ಯಾವುದೇ ತೊಂದರೆ ಆಗದಂತೆ ಸೂಕ್ತ ರಕ್ಷಣೆ ಒದಗಿಸುತ್ತೇವೆ. ನೀವು ಬಯಸಿದರೆ ಮಹಿಳಾ ಸಾಂತ್ವನ ಕೇಂದ್ರದಲ್ಲೂ ಇರಬಹುದು. ಇಲ್ಲವಾದರೆ ನೀವು ಬಯಸಿದ ಸ್ಥಳದಲ್ಲೂ ಇರಬಹುದು ಎಂದು ಎಸ್‌ಐಟಿ ತನಿಖಾಧಿಕಾರಿಗಳು ಮಂಗಳವಾರ ಯುವತಿಯ ವಿಚಾರಣೆ ನಡೆಸಿದ ಬಳಿಕ ಹೇಳಿದ್ದರು.

ಯುವತಿ ಪರಿಚಿತ‌ ಮಹಿಳಾ ಲಾಯರ್ ಮನೆಯಲ್ಕಿ ವಾಸವಾಗಲು ಇಚ್ಚಿಸಿದ್ದಳು. ಎಸ್ಐಟಿ ವಿಚಾರಣೆ ಮುಗಿದ ಬಳಿಕ ರಾತ್ರಿ 8 ಗಂಟೆಗೆ ಆಡುಗೋಡಿ ಟೆಕ್ನಿಕಲ್ ಸೆಂಟರ್‌ನಿಂದ ಯುವತಿ ನೀಡಿದ ವಿಳಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕರೆದುಕೊಂಡು ಹೋಗಲಾಗಿತ್ತು. ಯುವತಿ ವಾಸವಿರುವ ನಿವಾಸಕ್ಕೂ ಹೆಚ್ಚಿನ ಭದ್ರತೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net