

ವಿಜಯಪುರ: ಕಳೆದೊಂದು ತಿಂಗಳಿಂದ ರಾಜ್ಯಾದ್ಯಂತ ಸುದ್ದಿಯಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ 'ಲೇಡಿ' ಪೋಷಕರು ಇದೀಗ ತವರಿಗೆ ಮರಳಿದ್ದಾರೆ.
ನಿಡಗುಂದಿಯ ಆಕೆಯ ಅಜ್ಜಿ ಮನೆಗೆ ಶಿಫ್ಟ್ ಆಗಿದ್ದು ಬೆಳಗ್ಗೆ ಬೆಳಗಾವಿ ಪೋಲಿಸರು ಹಾಗೂ ಸ್ಥಳೀಯ ಪೋಲಿಸರು ಪೋಷಕರನ್ನು ನಿವಾಸಕ್ಕೆ ಕರೆತಂದಿದ್ದಾರೆ. ಇಲ್ಲಿನ ವಿರೇಶ ನಗರದಲ್ಲಿರುವ ಮನೆಯಲ್ಲಿ ಪೋಷಕರು ಉಳಿದುಕೊಂಡಿದ್ದು ಸ್ಥಳೀಯ ಪೋಲಿಸರಿಂದ ಭದ್ರತೆ ಒದಗಿಲಾಗಿದೆ.
ಸದರಿ ಮನೆ ಎರಡು ತಿಂಗಳಿಂದ ಖಾಲಿಯಾಗಿತ್ತು. ಕಬ್ಬನ ಪಾರ್ಕ್ ಠಾಣೆ ಪೊಲೀಸರು ಹಾಗೂ ಎಸ್ಐಟಿ ತಂಡ ಮನೆಗೆ ಭೇಟಿ ನೀಡಿ ನೊಟೀಸ್ ಅಂಟಿಸಿದ್ದರು. ಇದೀಗ ಕುಟುಂಬಸ್ಥರ ಆಗಮನ ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.
ಸಿಡಿ ಲೇಡಿ ಪೋಷಕರನ್ನು ಮಾಧ್ಯಮದವರ ಕಣ್ತಪ್ಪಿಸಿ ರಾತ್ರೋರಾತ್ರಿ ಸ್ಥಳಾಂತರಿಸಲಾಗಿದೆ. ತಡರಾತ್ರಿ ಮೂರು ಗಂಟೆಗೆ ಸ್ಥಳಾಂತರ ಮಾಡಿದ್ದಾರೆ. ಅಚ್ಚರಿಯೆಂದರೆ, ಯುವತಿ ಪೋಷಕರು ಇರುವ ಏರಿಯಾ ವಿದ್ಯುತ್ ತೆಗೆದು ಸ್ಥಳಾಂತರ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.