ತಂಗಲಿ ಗ್ರಾಮ ಪಂಚಾಯಿತಿಗೆ ರಮೇಶ್ ಅಧ್ಯಕ್ಷ

8KDR2
Published on

ಕಡೂರು: ತಂಗಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಟಿ.ರಮೇಶ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಕ ಆಶೋಕ್ ಕಾರ್ಯನಿರ್ವಹಿಸಿದರು. ಈ ನಂತರ ನಡೆದ ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷ ಟಿ.ರಮೇಶ್ ಮಾತನಾಡಿ, ಎಲ್ಲ ಸದಸ್ಯರ ಸಹಕಾರದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು , ತಂಗಲಿ ಗ್ರಾಮ ಪಂಚಾಯಿತಿ ಕಡೂರು ಪಟ್ಟಣದಕ್ಕೆ ಹೊಂದಿಕೊಂಡಿದ್ದು ಅನೇಕ ಬಡಾವಣೆಗಳು ಗ್ರಾಪಂ ವ್ಯಾಪ್ತಿಗೆ ಸೇರುತ್ತಿದೆ ಅವರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಲು ಶ್ರಮಿಸಲಾಗುವುದು. ಕುಡಿಯುವ ನೀರು, ಚರಂಡಿ ಮತ್ತು ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದರು.

ಉಪಾಧ್ಯಕ್ಷೆ ವಿಜಯಬಾಯಿ, ಸದಸ್ಯರಾದ ರಘುರಾಮ್, ಜ್ಯೋತಿ ಎಸ್, ಪರಮೇಶ್ವರಪ್ಪ, ಬಿ.ಟಿ. ಗಂಗಾಧರನಾಯ್ಕ, ಅರತಿ, ಕಾವೇರಿಬಾಯಿ ಕೃಷ್ಣನಾಯ್ಕ, ಗಿರೀಶ್, ಸುಧಾ, ಪಿಡಿಒ ಸುನೀಲ್, ಕಾರ್ಯದರ್ಶಿ ಸುಶ್ಮಿತಾ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net