ರಮೇಶ ಜಾರಕಿಹೊಳಿಗೆ ಆತ್ಮೀಯ ಸ್ವಾಗತ

0102
Published on

ಗೋಕಾಕ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಗೋಕಾಕ ನಗರಕ್ಕೆ ಶುಕ್ರವಾರ ಆಗಮಿಸಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ತಿಳಿಸಿ ಮಾತನಾಡಿದ ಸಚಿವ ರಮೇಶ, ಕೋವಿಡ್- 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿ ಗಳು ಮತ್ತು ಪಕ್ಷದ ಕಾರ್ಯಕರ್ತರು ದೈಹಿಕ ಅಂತರ ಕಾಪಾಡಿಕೊಂಡು ಭೇಟಿ ಮಾಡಲು ಮನವಿ ಮಾಡಿದರು. ಅಭಿನಂದಿಸಲು ಯಾರೂ ಕೂಡಾ ಹಾರ, ತುರಾಯಿಗಳನ್ನು ತರಬಾರದು ಎಂದು ಕಳಕಳಿಯಿಂದ ಕೋರಿದರು.

ಪಟಾಕಿ ಸಿಡಿಸಿ ಸ್ವಾಗತ: ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡು ಗೋಕಾಕ ನಗರಕ್ಕೆ ಗುರುವಾರ ರಾತ್ರಿ ಆಗಮಿಸಿದ್ದ ಸಚಿವ ರಮೇಶ ಜಾರಕಿಹೊಳಿ, ಶುಕ್ರವಾರ ತಮ್ಮ ಸ್ವ-ಗೃಹದಿಂದ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸುತ್ತಿದ್ದಂತೆ ಸಚಿವರನ್ನು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮಣ್ಣವರ, ಶಂಕರ ಧರೆಣ್ಣವರ, ಆನಂದ ಗೊಟಡಕಿ, ಶಿವಾನಂದ ಹಿರೇಮಠ, ಬಸವರಾಜ ಹಿರೇಮಠ, ರಾಜು ಹಿರೇಅಂಬಿಗೇರ, ಸತೀಶ ಮನ್ನಿಕೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net