ಕರೊನಾ ಭೀತಿ, ಸರಳ ವಿವಾಹಕ್ಕೆ ಮುಂದಾದ ಮಾಜಿ ಶಾಸಕ ಭೂಸನೂರ

SND 17-3
Published on

ಸಿಂದಗಿ: ಎಲ್ಲೆಡೆ ಕರೊನಾ ಸೋಂಕು ಭೀತಿ ಹರಡಿದ್ದರಿಂದ ಪಟ್ಟಣದ ಮಾಜಿ ಶಾಸಕ ರಮೇಶ ಭೂಸನೂರ ಅವರು ತಮ್ಮ ಮಗಳ ಮದುವೆ ಮುಂದೂಡದೆ, ಸರಳವಾಗಿ ವಿವಾಹ ಕಾರ್ಯ ನಡೆಸಲು ತೀರ್ಮಾನಿಸಿದ್ದಾರೆ.
ವಿಜಯಪುರ ನಗರದ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಮಾ.19 ರಂದು ರಮೇಶ ಭೂಸನೂರ ಅವರು ತಮ್ಮ ಮಗಳ ಮದುವೆ ಮಾಡಲು ನಿಶ್ಚಯಿಸಿದ್ದು, ಈಗಾಗಲೇ 10 ಸಾವಿರಕ್ಕೂ ಹೆಚ್ಚು ಆಮಂತ್ರಣ ಪತ್ರಿಕೆಗಳನ್ನು ಹಂಚಲಾಗಿದೆ. ಮದುವೆ ಕಾರ್ಯಕ್ಕಾಗಿ ಎಲ್ಲ ವ್ಯವಸ್ಥೆ ತಯಾರಿಯನ್ನೂ ಮಾಡಲಾಗಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಸೂಚನೆ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರವು ಕೋವಿಡ್-19 (ಕರೊನಾ ವೈರಸ್) ಜನರಿಂದ ಜನರಿಗೆ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚು ಜನರು ಸೇರುವಂತಹ ಸಭೆ ಸಮಾರಂಭಗಳನ್ನು ನಿರ್ಬಂಧಿಸಿದ ಹಿನ್ನೆಲೆ ತಮ್ಮ ಮಗಳ ಮದುವೆಯನ್ನು ಸರಳವಾಗಿ ಮಾಡಲು ನಿರ್ಧರಿಸಿದ್ದಾರೆ.
ಡಾ. ಪ್ರೀತಿ ಹಾಗೂ ಡಾ. ಪ್ರೇಮಸಾಗರ ಮದುವೆ ಹಮ್ಮಿಕೊಂಡಿರುವುದು ತಮ್ಮೆಲ್ಲರಿಗೂ ತಿಳಿದ ಸಂಗತಿ. ಕಾರಣ ನಮ್ಮ ಮಗಳ ಮದುವೆ ಶುಭ ಕಾರ್ಯವನ್ನು ಕುಟುಂಬದವರೊಂದಿಗೆ ಸರಳವಾಗಿ ನೆರವೇರಿಸಲಾಗುವುದು. ಆತ್ಮೀಯ ಆಗಮನಾಭಿಲಾಷಿಗಳು ತಮ್ಮ ತಮ್ಮ ಸ್ಥಳಗಳಿಂದಲೇ ನವ ವಧು-ವರರಿಗೆ ಶುಭ ಕೋರಿ ಆಶೀರ್ವದಿಸಬೇಕಾಗಿ ಭೂಸನೂರ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net