

ಶೃಂಗೇರಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೊಡ್ತಲು ರಮೇಶ್‌ಭಟ್ ನೇಮಕಗೊಂಡಿದ್ದು,
ಶಾಸಕ ಟಿ.ಡಿ.ರಾಜೇಗೌಡರ ನಿವಾಸದಲ್ಲಿ ಅಧಿಕೃತ ಪತ್ರವನ್ನು ಶಾಸಕರು ನೂತನ
ಅಧ್ಯಕ್ಷರಿಗೆ ಮಂಗಳವಾರ ನೀಡಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ನಿಯಮದಂತೆ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರ
ಬದಲಾವಣೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಹುದ್ದೆ ನೀಡಲಾಗಿದೆ. ಬೂತ್
ಮಟ್ಟದಿಂದ ಪಕ್ಷ ಸಂಘಟನೆಗೆ ನೂತನ ಅಧ್ಯಕ್ಷರು ಕಾರ್ಯಕರ್ತರೊಂದಿಗೆ ಶ್ರಮಿಸಲಿದ್ದಾರೆ
ಎಂದರು.
ನೂತನ ಅಧ್ಯಕ್ಷ ಕೆ.ಎಂ.ರಮೇಶ್ ಭಟ್ ಮಾತನಾಡಿ, ಪಕ್ಷ ನೀಡಿರುವ ಉನ್ನತ ಹುದ್ದೆಯನ್ನು
ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರನ್ನು
ವಿಶ್ವಾಸಕ್ಕೆ ಪಡೆದು ಸಂಘಟನೆಗೆ ಒತ್ತು ನೀಡಲಾಗುತ್ತದೆ ಎಂದರು. ಮುಖಂಡರಾದ
ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಭಾಸ್ಕರ ನಾಯ್ಕ, ರಾಜಕುಮಾರ್, ನೂತನ ಹೆಗ್ಡೆ, ಅಜಿತ್
ಅಣ್ಕುಳಿ, ಚಂದ್ರಶೇಖರ್, ರಾಜಕುಮಾರ್ ಹೆಗ್ಡೆ ಇತರರು ಇದ್ದರು.