ನೂತನ ಕಸ ವಿಲೇವಾರಿ ಘಟಕಕ್ಕೆ ರಾಮದಾಸ್ ಭೇಟಿ

DSC_8612
Published on

ಮೈಸೂರು: ಕೆಸರೆ ಭಾಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಸ ವಿಲೇವಾರಿ ಘಟಕಕ್ಕೆ ಮಂಗಳವಾರ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.


ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಬೇಕು ಎಂದು ಕೆಸರೆಯಲ್ಲಿ 200 ಮೆಟ್ರಿಕ್ ಟನ್ ಸಾಮರ್ಥ್ಯದ ಕಸ ವಿಲೇವಾರಿ ಘಟಕ ಸ್ಥಾಪಿಸಲಾಗುತ್ತಿದೆ. ಹೊಸ ತಂತ್ರಜ್ಞಾನ ಅಳವಡಿಸುವ ಮೂಲಕ ಘಟಕದಿಂದ ವಾಸನೆ ಬಾರದಿಂತೆ ಕೆಲಸ ಮಾಡಲಾಗುತ್ತಿದೆ. ನಿರ್ದಿಷ್ಟ ಕಾಲದೊಳಗೆ ಘಟಕದ ಕೆಲಸ ಮುಗಿಸಬೇಕು. ಡಿಸೆಂಬರ್ 15ರೊಳಗೆ ಘಟಕದ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ, ಟ್ರಯಲ್ ಪ್ರಾರಂಭಿಸಬೇಕು.

ರಾಯನಕೆರೆ ಮತ್ತು ಕೆಸರೆ ಎರಡು ಕಸ ವಿಲೇವಾರಿ ಘಟಕಗಳು ಪೂರ್ಣ ಪ್ರಮಾಣದಲ್ಲಿ ಚಾಲನೆಗೊಂಡಲ್ಲಿ ವಿದ್ಯಾರಣ್ಯಪುರಂನಲ್ಲಿರುವ ಎಕ್ಸೆಲ್ ಪ್ಲಾಂಟ್‌ನ ಕಸ ವಿಲೇವಾರಿ ಘಟಕದಲ್ಲಿರುವ 7 ಲಕ್ಷ ಟನ್ ಕಸವನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net