

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ 3.50 ಕೋಟಿ ರೂ.ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ. ರಾಮದಾಸ್ ಚಾಲನೆ ನೀಡಿದರು.
ಕೃಷ್ಣಮೂರ್ತಿಪುರಂನ ಅನಂತಸ್ವಾಮಿ ಉದ್ಯಾನ ಅಭಿವೃದ್ಧಿ ಕಾಮಗಾರಿ, ಅಶೋಕಪುರಂನ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನ, ಜಯನಗರದ ಚಿನ್ನಗಿರಿ ಕೊಪ್ಪಲು ಮುಖ್ಯರಸ್ತೆಯ ಡಾಂಬರೀಕರಣ, ಪೈಲ್ವಾನ್ ಬಸವಯ್ಯ ಸಮುದಾಯ ಭವನದಲ್ಲಿ ಶೌಚಾಗೃಹ ನಿರ್ಮಾಣ ಕಾಮಗಾರಿ, ಶ್ರೀರಾಂಪುರ ದೇವಯ್ಯನಹುಂಡಿ ಸ್ಮಶಾನ ಅಭಿವೃದ್ಧಿ ಕಾಮಗಾರಿ ಹಾಗೂ ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ಉದ್ಯಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ಅನಂತಸ್ವಾಮಿ ಉದ್ಯಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಸಂತಸ ಉಂಟು ಮಾಡಿದೆ. ಈ ಉದ್ಯಾನದಲ್ಲಿ ಸದಾ ಗಾಯನ ಕಾರ್ಯಕ್ರಮ ನಡೆಯುವ ರೀತಿಯಲ್ಲಿ ಆಡಿಯೋ ವ್ಯವಸ್ಥೆಗಳನ್ನು ಜೋಡಿಸಲಾಗುವುದು. ಅಲ್ಲದೆ ಯೋಗಕ್ಕೆ ಅನುಕೂಲವಾಗುವ ರೀತಿಯಲ್ಲಿ ವೇದಿಕೆ ನಿರ್ಮಿಸಲಾಗುವುದು ಎಂದು ಹೇಳಿದರು.
ಸಚಿವನಾದರೆ ಮಾತ್ರ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯ ಎಂಬ ಭಾವನೆ ನನ್ನಲ್ಲಿ ಇಲ್ಲ. ಸಚಿವನಾಗದೆ ಇದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿದೆ ಎಂಬುದನ್ನು ಸಾಧಿಸಿ ತೋರಿಸಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾದ ಹಲವು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಿದ್ದೇನೆ ಎಂದರು.
ಈ ಸಂದರ್ಭ ನಗರಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ, ಎಂ.ಎಸ್. ಶೋಭಾ, ಗೀತಾಶ್ರೀ ಯೋಗನಂದಾ, ಮಾ.ವಿ. ರಾಮಪ್ರಸಾದ್, ಪಿ.ಟಿ. ಕೃಷ್ಣ, ಸ್ಥಳೀಯ ಮುಖಂಡರಾದ ರವಿ, ಮಧು, ದೀಪು, ಪುನೀತ್, ನಾಗರಾಜು ಬಿಲ್ಲಯ್ಯ, ರಾಜು, ರಾಜೀವ, ರಾಜಣ್ಣ, ಮಲ್ಲೇಶ್, ಗೀರೀಶ್, ಅನಿಲ್, ಪ್ರದೀಪ್, ಸೋಮಣ್ಣ, ನಾಗರಾಜ್, ಕುಮಾರ್, ಗಿರೀಶ್, ಸತೀಶ್, ಸಿದ್ದರಾಜು, ಸಾಗರ್, ಪುರುಷೋತ್ತಮ, ಶಿವಪ್ಪ, ಉಮಾಶಂಕರ್, ಶಿವಪ್ರಸಾದ್, ಮಂಜು, ರಾಮು, ಪಾಪಣ್ಣ, ಮರುಳಿ, ಮಹೇಶ, ಕಾರ್ತಿಕ್ ಹಾಗೂ ಇತರರು ಇದ್ದರು.