ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ

Rambhapuri Sri's palanquin festival
ದೇವರಹಿಪ್ಪರಗಿ ಜಡಿಮಠ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ಅಂಗವಾಗಿ ಬಾಳೆಹೊನ್ನೂರ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ದೇವರಹಿಪ್ಪರಗಿ: ಪಟ್ಟಣದ ಜಡಿಮಠ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ಅಂಗವಾಗಿ ಬಾಳೆಹೊನ್ನೂರ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಭಕ್ತಿ, ಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.

ಪಟ್ಟಣದ ಜಡಿಮಠದ ಲೋಕಾರ್ಪಣೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬುಧವಾರ ಹೊಸನಗರದ ಪ್ರಳಯಕಟ್ಟಿ ವೀರಣ್ಣ ದೇವಸ್ಥಾನದಿಂದ ಆರಂಭಗೊಂಡ ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹೊಸೂರ ರಸ್ತೆ, ಮೇನ್​ ಬಜಾರ್​, ವೀರಭದ್ರೇಶ್ವರ ದೇವಸ್ಥಾನ, ವಠಾರದ ಮೂಲಕ ಸಾಗಿ ಜಡಿಮಠ ತಲುಪಿತು. ಕುಂಭ, ಕಲಶ ಹೊತ್ತ ನೂರಾರು ಮಹಿಳೆಯರು, ನಾವಲಗಿ ಕರಡಿ ಮಜಲು, ಕಾಖಂಡಕಿ ಸಂಬಾಳ ಹಾಗೂ ಕರಡಿ ಮಜಲು, ಶಿವಣಗಿಯ ರೇವಣಸಿದ್ಧೇಶ್ವರ ಹಾಗೂ ಮರಡಿ ಸಿದ್ಧೇಶ್ವರ ಡೊಳ್ಳಿನ ವಾಲ ತಂಡಗಳು, ಗೊಂಬೆ ಕುಣಿತ ಮೆರವಣಿಗೆಗೆ ಮೆರುಗು ತಂದವು.

ಮೆರವಣಿಗೆಯಲ್ಲಿ ಕನ್ನೂರಿನ ಸೋಮನಾಥ ಶ್ರೀಗಳು, ಮನಗೂಳಿಯ ಅಭಿನವ ಸಂಗನಬಸವ ಶ್ರೀಗಳು, ಜಡೇಸಿದ್ದೇಶ್ವರ ಶ್ರೀಗಳು, ಜಿಲ್ಲೆಯ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ನಿವತ್ತ ನೌಕರರ ಸಂದ ತಾಲೂಕು ಅಧ್ಯ ಸಿ.ಕೆ.ಕುದರಿ, ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ಚಿದಾನಂದ ಹಿರೇಮಠ(ಹರನಾಳ), ಸೋಮಶೇಖರ ಹಿರೇಮಠ, ರಮೇಶ ಮಶಾನವರ, ಶಿವಪ್ಪ ವಸ್ತ್ರದ, ಸಿದ್ದು ಆನಂದಿ, ಪ್ರಭುದೇವ ಹಿರೇಮಠ, ರಾಮು ದೇಸಾಯಿ, ಬಂಡೆಪ್ಪಗೌಡ ದಿಂಡವಾರ, ಪಂಚಾರಿ ಮಿಂಚನಾಳ, ನಿಂಬೆಣ್ಣಪ್ಪ ಧುತ್ತರಗಾಂವಿ, ಉಮಾಕಾಂತ ಸೊನ್ನದ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net