ಸದೃಢ ಶರೀರವಿದ್ದರೆ ಮಾತ್ರ ಆರೋಗ್ಯ,  ಶ್ರೀ ಶಿವಸಿದ್ದರಾಮೇಶ್ವರ ಸ್ವಾಮೀಜಿ ಹೇಳಿಕೆ,  ರಂಭಾಪುರಿ ಸಮುದಾಯ ಭವನದಲ್ಲಿ ಯೋಗ ಶಿಬಿರ

IMG-20250110-WA0014.jpg
Published on

ಹುಬ್ಬಳ್ಳಿ: ಸದೃಢವಾದ ಶರೀರವಿದ್ದರೆ ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಎಂದು ಸುಳ್ಳದ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯರು ಹೇಳಿದರು.

ಇಲ್ಲಿಯ ವಿದ್ಯಾನಗರ ಶ್ರೀ ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಶುಕ್ರವಾರ ಶ್ರೀಮದ್ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ 69ನೇ ಜನ್ಮದಿನಾಚರಣೆ ಅಂಗವಾಗಿ ಶ್ರೀ ಜಗದ್ಗುರು ರಂಭಾಪುರೀಷ ಸಾಂಸತಿಕ ಸೇವಾ ಸಂದಿಂದ ಏರ್ಪಡಿಸಿರುವ ಉಚಿತ ಯೋಗ ಶಿಬಿರ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಆರೋಗ್ಯವಂತ ಜೀವನ ನಡೆಸಲು ನಿತ್ಯ ತಪ್ಪದೆ ಯೋಗ ಮಾಡಬೇಕು. ಇದರಿಂದ ಶರೀರ ಮತ್ತು ಮನಸ್ಸು ಎರಡೂ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಕಲಗೌಡ ಪಾಟೀಲ ಮಾತನಾಡಿ, ಭಾರತ ದೇಶದಲ್ಲಿ ಋಷಿ ಮುನಿಗಳಿಂದ ಹುಟ್ಟಿದ ಯೋಗ ಇವತ್ತಿನ ದಿವಸ ಇಡೀ ಜಗತ್ತೆ ಒಪ್ಪಿಕೊಂಡು ಯೋಗಾಭ್ಯಾಸವನ್ನು ಮಾಡುತ್ತಿರುವುದು ಎಲ್ಲರಿಗೂ ಸಂತೋಷದ ಸಂಗತಿ ಎಂದರು.

ಯೋಗ ಸನಾತನ ಸಂಸ್ಕೃತಿ ಯೋಗ ವಿದ್ಯಾಕೇಂದ್ರದ ಸಂಸ್ಥಾಪಕ ಚೇರ್ಮನ್ ಅಶೋಕ ಬಾದಾಮಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ, ಶ್ರೀ ರಂಭಾಪುರಿ ಜಗದ್ಗುರುಗಳ ಜನ್ಮದಿನದಂದು ಪ್ರತಿ ವರ್ಷ ಯೋಗ ಶಿಬಿರ ಆಯೋಜಿಸುತ್ತ ಬರಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಆರೂಢ ಯೋಗ ಕೇಂದ್ರದ ಗುರುಗಳಾದ ಡಾ. ಪಂಚಲಿಂಗಪ್ಪ ಕವಲೂರು, ಯೋಗದ ಮಹತ್ವ ತಿಳಿಸಿ ವಿವಿಧ ಆಸನಗಳನ್ನು ಮಾಡಿಸಿದರು.

ವಿ.ಜಿ. ಪಾಟೀಲ, ವಿ.ಎಸ್. ಸೊಪ್ಪಿಮಠ, ಪೂಜಾ ಹಿರೇಗೌಡರ, ಶಿವಲೀಲಾ ಬೋಜಶೆಟ್ಟರ, ಯೋಗ ಬಂಧುಗಳು ಭಾಗವಹಿಸಿದ್ದರು.
ಡಾ. ಎಸ್.ಯು. ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಬೆಂಗೇರಿ ಸ್ವಾಗತಿಸಿದರು. ಎಸ್.ಸಿ. ಕಮ್ಮಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net