ರಂಭಾಪುರಿ ಪೀಠದ ವೀರಗಂಗಾಧರ ಜಗದ್ಗುರುಗಳ ಪುಣ್ಯಸ್ಮರಣೆ

web 5
Published on

ಬಾಳೆಹೊನ್ನೂರು: ರಂಭಾಪುರಿ ಪೀಠದಲ್ಲಿ ಲಿಂಗೈಕ್ಯ ರಂಭಾಪುರಿ ಜಗದ್ಗುರುಗಳಾದ ವೀರ ತಪಸ್ವಿ ಶ್ರೀ ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ ಅವರ 38ನೇ ಪುಣ್ಯಸ್ಮರಣೋತ್ಸವವನ್ನು ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಲಿಂಗೈಕ್ಯ ಜಗದ್ಗುರುಗಳ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಶ್ರೀಪೀಠದ ಭದ್ರಕಾಳಿ ಅಮ್ಮನವರ ದೇವಾಲಯದ ಮುಂಭಾಗ ದಾರುಕಾಚಾರ್ಯ ಶಾಸ್ತ್ರಿ ನೇತೃತ್ವದಲ್ಲಿ ರುದ್ರಹೋಮ ಹಾಗೂ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಪೀಠದ ಕ್ಷೇತ್ರನಾಥ ವೀರಭದ್ರಸ್ವಾಮಿ, ಜಗದ್ಗುರು ರೇಣುಕಾಚಾರ್ಯರು, ಶಕ್ತಿಮಾತೆ ಚೌಡೇಶ್ವರಿ, ಭದ್ರಕಾಳಿ ಅಮ್ಮನವರು, ಮಹಾಸೋಮೇಶ್ವರ ಲಿಂಗ ಹಾಗೂ ಪೀಠದ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗೆ ಅಷ್ಟೋತ್ತರ, ವಿಶೇಷ ಅಭಿಷೇಕ, ಮಹಾಪೂಜೆ ನೆರವೇರಿಸಲಾಯಿತು. ಅರ್ಚಕ ಜಗದೀಶ್, ರುದ್ರೇಶ್, ವಿಶ್ವನಾಥ ಹಿರೇಮಠ, ರೇಣುಕ, ಸುರೇಶ್ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net