ರಂಭಾಪುರಿ ಪೀಠದಲ್ಲಿ ಸಹಸ್ರ ದೀಪೋತ್ಸವ

web 5
Published on

ಬಾಳೆಹೊನ್ನೂರು: ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನದಲ್ಲಿ ಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನ.30ರ ಸಂಜೆ 7.30ಕ್ಕೆ ಕಾರ್ತಿಕ ಸಹಸ್ರ ದೀಪೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಜರುಗುವುದು. ಅಂದು ಬೆಳಗ್ಗೆ 8.30ಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶ್ರೀ ಸೋಮೇಶ್ವರ ಮಹಾಲಿಂಗ, ಶ್ರೀ ವಿಜಯ ವಿನಾಯಕ, ಶಕ್ತಿ ಮಾತೆಯರಾದ ಪಾರ್ವತಿ, ಚೌಡೇಶ್ವರಿ, ಭದ್ರಕಾಳಿ ಮತ್ತು ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗೆ ವಿಶೇಷ ಪೂಜೆ ನಡೆಯುವುದು. ದೀಪಾರಾಧನೆ ಸೇವೆಯನ್ನು ಶಿಗ್ಗಾಂವಿ ಲಲಿತಾದೇವಿ ಶಿವಪುತ್ರಯ್ಯ ಸುರಗೀಮಠ, ವಿದ್ಯುತ್ ದೀಪಾಲಂಕಾರ ಸೇವೆಯನ್ನು ಗುತ್ತಿಗೆದಾರ ವೀರೇಶ ಪಾಟೀಲ್ ಮತ್ತು ಬಾಳೆಹೊನ್ನೂರು, ಬಾಸಾಪುರ, ಕಡವಂತಿ ಭಕ್ತರಿಂದ ವಿವಿಧ ಸೇವೆಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net