ರಾಮಭಕ್ತರ ಹತ್ತಿಕ್ಕುವ ಯತ್ನ ಸಲ್ಲ

4SND-04
Published on


ಸಿಂಧನೂರು: ರಾಮ ಭಕ್ತರ ಬಂಧನ ಖಂಡಿಸಿ ಡಿವೈಎಸ್‌ಪಿ ಎಸ್.ಬಿ.ತಳವಾರಗೆ ಹಿಂದು ಜಾಗರಣ ವೇದಿಕೆ ತಾಲೂಕು ಘಟಕ ಗುರುವಾರ ಮನವಿ ಸಲ್ಲಿಸಿತು.

ಸಿದ್ದರಾಮಯ್ಯ ಸರ್ಕಾರ ಕಳೆದ 31 ವರ್ಷ ಹಳೆಯದಾದ ಅಯೋಧ್ಯೆ ರಾಮ ಮಂದಿರ ಹೋರಾಟ ಪ್ರಕರಣವನ್ನು ಮುಂದಿಟ್ಟುಕೊಂಡು ರಾಮ ಭಕ್ತರನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಈ ಮೂಲಕ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ಬಂಧಿಸಿರುವ ರಾಮ ಭಕ್ತರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಪ್ರಮುಖರಾದ ಉದಯ, ಮರಿಸ್ವಾಮಿ, ಅವಿನಾಶ ಮುಳ್ಳೂರು, ಅಭಿಷೇಕ ಸಿಂಧನೂರು, ಸುಭಾಷ, ಮಂಜುನಾಥ ಹೊಸೂರು, ವೆಂಕಟೇಶ, ಯಂಕೋಬ, ಬಸವ ಗಾಂಧಿನಗರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net