

ವಿಜಯವಾಣಿ ಸುದ್ದಿಜಾಲ ಗದಗ
ಮನುಷ್ಯ ಎಷ್ಟು ವರ್ಷ ಬದುಕಿದರೂ ಒಂದಿಲ್ಲ ಒಂದು ದಿನ ಅಗಲಿಕೆ ಅನಿವಾರ್ಯ. ಕಾಯ ಕಣ್ಮರೆಯಾದರೂ ನೆನಹು ಮಾತ್ರ ಶಾಶ್ವತವಾಗಿ ಉಳಿಯುವ ಹಾಗೆ ಶ್ರಮಿಸಿದ ಕೀತಿರ್ ಗೌರವ ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಗುರುವಾರ ಗದಗ ನಗರದ ಸೂಡಿ ಜುಕ್ತಿ ಹಿರೇಮಠದ ಜಗದ್ಗುರು ವಿಶ್ವಾರಾಧ್ಯ ಮಂದಿರದಲ್ಲಿ ಲಿಂ. ಕೊಟ್ಟೂರು ಬಸವೇಶ್ವರ ಶ್ರೀಗಳ 105ನೇ ವರ್ಷದ ಪುಣ್ಯಾರಾಧನೆ, ಸುಪ್ರಭಾತ ಬಿಡುಗಡೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯ ಜೀವನದಲ್ಲಿ ನಾಲ್ಕು ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಾಧಿಸದಿದ್ದರೆ ವ್ಯರ್ಥ. ಧರ್ಮ, ಅರ್ಥ, ಕಾಮ ಮತ್ತು ಮೋಗಳೆಂಬ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಾಧಿಸುವ ಛಲ ಹೊಂದಿರಬೇಕು. ಮನುಷ್ಯ ಯಾವಾಗಲೂ ಬಯಸುವುದು ಸಂಪತ್ತು ಮತ್ತು ಆ ಸಂಪತ್ತಿನಿಂದ ತನ್ನ ಇಷ್ಟಾರ್ಥಗಳನ್ನು ಪಡೆಯಲು ಬಯಸುತ್ತಾನೆ. ಆದರೆ, ಇವೆರಡು ಪ್ರಾಪ್ತವಾಗಬೇಕಾದರೆ ಮೊದಲು ಧರ್ಮಾಚರಣೆಯೇ ಮೂಲವಾಗಿದೆ. ಉಜ್ವಲ ಭವಿಷ್ಯಕ್ಕೆ ಧರ್ಮ ದಿಕ್ಸೂಚಿಯಾಗಿದೆ. ನಿಜವಾದ ಆಚರಣೆಯೇ ಧರ್ಮವೆಂದೆನಿಸಿಕೊಳ್ಳುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮದ ದಶ ಸೂತ್ರಗಳನ್ನು ಲಿಂ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಬದುಕಿನ ಆಚರಣೆಯಲ್ಲಿ ತಂದು ಭಕ್ತರ ಬಾಳಿಗೆ ಬೆಳಕು ತೋರಿದವರು ಎಂದರು.
ಬದುಕು ಮಾತ್ರ ನಮ್ಮ ಕೈಯಲ್ಲಿದೆ. ಹುಟ್ಟು ಸಾವುಗಳ ಮಧ್ಯೆ ಇರುವ ಬದುಕನ್ನು ಸಮೃದ್ಧವಾಗಿ ಕಟ್ಟಿಕೊಳ್ಳುವ ಜವಾಬ್ದಾರಿ ಅವರವರದಾಗಿದೆ. ಇಂದಿನ ಪಟ್ಟಾಧ್ಯರಾದ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಪೂರ್ವಜರು ಹಾಕಿದ ಹೆದ್ದಾರಿಯಲ್ಲಿ ಮುನ್ನಡೆದು ಭಕ್ತರಿಗೆ ಸಂಸ್ಕಾರ ಧರ್ಮಾಚಾರಗಳನ್ನು ಮನವರಿಕೆ ಮಾಡಿಕೊಡುತ್ತಿರುವುದು ಅವರ ಕ್ರೀಯಾಶೀಲತೆಗೆ ಸಾ ಎಂದು ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ನೇತೃತ್ವ ವಹಿಸಿದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮಾತನಾಡಿ ವೀರಶೈವ ಧರ್ಮ ವಿಶ್ವ ಬಂಧುತ್ವ ಮತ್ತು ಸಾಮರಸ್ಯ ಬದುಕಿಗೆ ಅತ್ಯಮೂಲ್ಯವಾದ ಕೊಡುಗೆ ಕೊಟ್ಟಿದೆ. ಶಿಣ ಮತ್ತು ಸಂಸ್ಕಾರದಿಂದ ಜೀವನ ಉಜ್ವಲಗೊಳ್ಳಲು ಸಾಧ್ಯ. ಲಿಂಕೈಕ್ಯ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಧರ್ಮ ಸಂಸತಿಯ ಉಳಿವು ಬೆಳವಣಿಗೆಗಾಗಿ ಬಹು ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರ 105ನೇ ವರ್ಷದ ಪುಣ್ಯ ಸ್ಮರಣೋತ್ಸವ ಶ್ರೀ ರಂಭಾಪುರಿ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಜರುಗುತ್ತಿರುವುದು ಎಲ್ಲ ಭಕ್ತ ಮಂಡಳಿಗೆ ಹರುಷ ತಂದಿದೆ ಎಂದರು. ಜಗದ್ಗುರು ವಿಶ್ವಾರಾಧ್ಯ ಮಂಗಲ ಮೂತಿರ್ಗೆ ವಿಶೇಷ ಪೂಜೆ ಹಾಗೂ ಪುಷ್ಪಾಲಂಕಾರ ಜರುಗಿತು.
ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಧರ್ಮ ಮರೆತಿದ್ದೇವೆ. ನಮ್ಮ ದೈನಿಂದಿನ ಚಟುವಟಿಕೆಯ ಜತೆಗೆ ಧರ್ಮ, ಸಂಸತಿ ಮರೆಯಬಾರದು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದು ಜಗದ್ಗಯ ಪೀಠದ ಸಂದೇಶ. ಪೂಜ್ಯ ಶ್ರೀಗಳ ಆಶಿರ್ವಾದ ನನ್ನ ಮೇಲಿದೆ. ಆರೋಗ್ಯದಲ್ಲಿ ಏರುಪೇರು ಆಗಿದ್ದ ಸಂದರ್ಭದಲ್ಲಿ ಅವರು ನೀಡಿದ್ದ ಪ್ರಸಾದ ಸೇವಿಸಿ ಗುಣಮುಖ ಆಗಿದ್ದೇನೆ. ಜಾತಿ ಜಾತಿಗಳಿಗೆ ಒಂದೊಂದು ಮಠ ಸ್ಥಾಪನೆ ಆಗಿವೆ. ಇವುಗಳ ನಡುವೆ ಪಂಚ ಪೀಠಗಳು ಸಮಾನತೆಯ ಪೀಠಗಳಾಗಿವೆ. ಧರ್ಮಗುರುಗಳ ಕಾರ್ಯಕ್ರಮಗಳನ್ನು ಹೆಚ್ಚೆಚು ಹಮ್ಮಿಕೊಳ್ಳುವ ಮೂಲಕ ಧರ್ಮ ಪಾಲನೆ ಅಗತ್ಯವಿದೆ ಎಂದು ಸಿಸಿ ಪಾಟೀಲ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ವೈಯಕ್ತಿಕ ಬದುಕನ್ನು ಬದಿಗಿಟ್ಟು ಸಮಾಜಕ್ಕೆ ಬದುಕಿದ ಜೀವಗಳು ಪರಮಾತ್ಮಕ್ಕೆ ಸಮಾನ. ಭಕ್ತರ ಕಲ್ಯಾಣ ಸಮಾಜ ಉದ್ಧಾರಕ್ಕೆ ಅವರು ತಮ್ಮ ಜೀವನ ಸರ್ಮಪಿಸಿಕೊಂಡಿದ್ದಾರೆ. ಗಂಧ ತನ್ನನ್ನು ಸವಿಸಿ ಸಮಾಜಕ್ಕೆ ಸುಗಂಧ ನೀಡಿದಂತೆ ಸಮಾಜಕ್ಕೆ ಜೀವನ ಅಪಿರ್ಸಿದ ಶ್ರೀಗಳು ಕೊಟ್ಟುರು ಶ್ರೀಗಳು ಎಂದರು.
ಕಾರ್ಯಕ್ರಮದಲ್ಲಿ ಕೊಟ್ಟುರು ಬಸವೇಶ್ವರ ಶ್ರೀಗಳ "ಸುಪ್ರಭಾತ ಕೃತಿ' ಪುಸ್ತಕ ಬಿಡುಗಡೆ ಮಾಡಲಾಯಿತು.
ಉಷಾ ದಾಸರ, ಜೂಕ್ತಿ ಹಿರೇಮಠ ಶ್ರೀಗಳು, ಮಲ್ಲಿಕಾರ್ಜುನ ಸಂಕೇಶ್ವರ ಇತರರು ಇದ್ದರು