ಧರ್ಮಾಚರಣೆಯಿಂದ ಜೀವನ ಉಜ್ವಲ: ರಂಭಾಪುರಿ ಶ್ರೀಗಳು

25GDG07
ಗದಗ ನಗರದಲ್ಲಿ ನಡೆದ ಧರ್ಮಸಭೆಯಲ್ಲಿ ತಮಭಾಪುರಿಗಳು ಎಚ್​.ಕೆ. ಪಾಟೀಲ ಹಾಗೂ ಡಿ.ಆರ್​. ಪಾಟೀಲ ಅವರನ್ನು ಸನ್ಮಾನಿಸಿದರು. ಎಸ್​. ವಿ. ಸಂಕನೂರು, ಮಾಜಿ ಶಾಸಕ ಡಿ. ಆರ್​. ಪಾಟೀಲ, ಜಿ. ಎಂ. ಚಿಕ್ಕಮಠ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಜೀವನದ ಶ್ರೇಯಸ್ಸಿಗೆ ಧರ್ಮವೇ ಮೂಲ. ಆಡುವ ಮಾತು ನಡೆಯುವ ದಾರಿ ಒಂದಾದಾಗ ಬದುಕಿಗೆ ಬೆಲೆ ಬರುತ್ತದೆ. ಧರ್ಮ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳದರು.
ಗದಗ ನಗರದಲ್ಲಿ ದಂಸಭೆ ನಡೆಸಿ ಮಾತನಾಡಿದ ಅವರು, ಆಧುನಿಕತೆ ಹೆಸರಿನಲ್ಲಿ ಸಂಸತಿ ಸಭ್ಯತೆಗಳು ನಾಶಗೊಳ್ಳಬಾರದು. ಅರಿವುಳ್ಳ ಮಾನವ ಜನ್ಮದಲ್ಲಿ ಒಂದಿಷ್ಟಾದರೂ ಶಿವಜ್ಞಾನದ ಅರಿವು ಆಚರಣೆಗಳನ್ನು ಅನುಸರಿಸಿ ಬಾಳಬೇಕಾಗುತ್ತದೆ. ನಾವು ನಿಂತ ನೆಲ, ಕುಡಿಯುವ ನೀರು, ತಿನ್ನುವ ಅನ್ನ, ಉಸಿರಾಡುವಂಥ ಗಾಳಿ ದೇವರ ಅಮೂಲ್ಯ ಕೊಡುಗೆ. ಏನೆಲ್ಲ ಸಂಪನ್ಮೂಲ ಕೊಟ್ಟ ಭಗವಂತನನ್ನು ದಿನದಲ್ಲಿ ಎರಡು ನಿಮಿಷ ಸ್ಮರಿಸಿ ಪೂಜಿಸಿದರೆ ಜನ್ಮ ಸಾರ್ಥಕಗೊಳ್ಳುತ್ತದೆ. ವೀರಶೈವ ಧರ್ಮದಲ್ಲಿ ದೇವರನ್ನು ಇಷ್ಟಲಿಂಗ ರೂಪದಲ್ಲಿ ಪೂಜಿಸುತ್ತಾರೆ. ಇಷ್ಟಲಿಂಗಾರ್ಚನೆಯಿಂದ ಎಲ್ಲ ಅನಿಷ್ಟಗಳು ದೂರವಾಗಿ ಇಷ್ಟಾರ್ಥಗಳು ದೊರಕುತ್ತವೆ. ಶಿವನನ್ನು ಪೂಜಿಸಿದರೆ ಸಕಲ ದೇವಾನು ದೇವತೆಗಳನ್ನು ಪೂಜಿಸಿದ ಲ ದೊರಕುತ್ತದೆ. ವೀರಶೈವ ಧರ್ಮದಲ್ಲಿ ಜಗದ್ಗುರು ರೇಣುಕಾಚಾರ್ಯರು ದಶ ಧರ್ಮ ಸೂತ್ರಗಳನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ. ಅವರ ಮೌಲ್ಯಾಧಾರಿತ ಚಿಂತನಗಳು ಸಕಲರ ಶ್ರೇಯಸ್ಸಿಗೆ ಸಹಕಾರಿಯಾಗಿವೆ. ಮಹಿಳೆಯರಿಂದ ಭಾರತೀಯ ಸಂಸತಿ ಬೆಳೆದುಕೊಂಡು ಬಂದಿದೆ. ಮುತೆದೆಯರಿಗೆ ಹಸಿರು ಬಳೆ, ಕುಂಕುಮ, ಕರಿಮಣಿ ಸರ, ಮೂಗುತಿ, ಕಾಲುಂಗುರ ಮತ್ತು ಮಾಂಗಲ್ಯ ಕರುಣಿಸಿದ ಕೀತಿರ್ ಶ್ರೀ ಜಗದ್ಗುರು ಪಂಚಾಚಾರ್ಯರಿಗೆ ಸಲ್ಲುತ್ತದೆ ಎಂದರು.
ಸಚಿವ ಎಚ್​. ಕೆ. ಪಾಟೀಲ, ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರು, ಮಾಜಿ ಶಾಸಕ ಡಿ. ಆರ್​. ಪಾಟೀಲ, ಜಿ. ಎಂ. ಚಿಕ್ಕಮಠ, ಪ್ರಶಾಂತ ಶಂಕ್ರಯ್ಯ ಶಾಬಾದಿಮಠ, ಪ್ರಸನ್ನರೇಣುಕಸ್ವಾಮಿ ಚಂದ್ರಶೇಖರಯ್ಯ ಶಾಬಾದಿಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net