ಅಯೋಧ್ಯೆಯಲ್ಲಿ ರಾಮಾಯಣ ನಾಟಕ

20-kkr2( 3-25 ramayana nataka ayodye
ಕಿಕ್ಕೇರಿ ಹೋಬಳಿಯ ಆನೆಗೊಳದ ಕಲಾವಿದರಿಂದ ಇತ್ತೀಚೆಗೆ ಅಯೋಧ್ಯೆಯಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
Published on

ಕಿಕ್ಕೇರಿ: ಹೋಬಳಿಯ ಆನೆಗೊಳದ ಶ್ರೀ ಆನೆಗೊಳದಮ್ಮ ಹಾಗೂ ಶ್ರೀ ಆಂಜನೇಯ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡ‘ಸಂಪೂರ್ಣ ರಾಮಾಯಣ’ ಪೌರಾಣಿಕ ನಾಟಕ ಪ್ರಶಂಸೆಗೆ ಪಾತ್ರವಾಯಿತು.

ನಾಟಕ ತಂಡದ ನೇತೃತ್ವ ವಹಿಸಿದ್ದ ರಾಮನ ಪಾತ್ರಧಾರಿ ಜಯಲಿಂಗೇಗೌಡ ಮಾತನಾಡಿ, ರಾಮಲಲ್ಲಾನ ಭವ್ಯ ಮಂದಿರ ಲೋಕಾರ್ಪಣೆಗೊಂಡು ವರ್ಷ ಪೂರ್ಣಗೊಂಡ ಸವಿನೆನಪಿನಲ್ಲಿ ಈ ನಾಟಕ ಪ್ರದರ್ಶನ ರಾಮನ ಜನ್ಮಭೂಮಿಯಲ್ಲಿ ಏರ್ಪಡಿಸಲಾಗಿತ್ತು. ತಮ್ಮಂತಹ ಕಲಾವಿದರಿಗೆ ಅವಿಸ್ಮರಣೀಯ ಕ್ಷಣದ ದಿನ ಇದಾಗಿತ್ತು. ಯಾವುದೇ ಫಲಾಪೇಕ್ಷೆಗಳಿಲ್ಲದೆ, ವಂತಿಕೆ ಪಡೆಯದೆ ನಮ್ಮ ಹಳ್ಳಿಗಾಡಿನ ಕಲಾವಿದರು ಬಲುದೂರದ ಮಾರ್ಯದಾ ಪುರುಷೋತ್ತಮನ ಜನ್ಮಭೂಮಿಗೆ ಸಂತಸದಿಂದ ಆಗಮಿಸಿ ಯಶಸ್ವಿ ನಾಟಕ ಪ್ರದರ್ಶನ ನೀಡಿರುವುದನ್ನು ಮರೆಯಲಾರೆ ಎಂದರು.

ನಾಟಕದಲ್ಲಿ ಜಯಲಿಂಗೇಗೌಡ(ರಾಮ), ಬಿ.ಎಸ್ ಮಂಜುನಾಥ್(ರಾವಣ), ಚೈತ್ರಾ(ಸೀತೆ), ಸಂತೋಷ್(ಲಕ್ಷ್ಮಣ), ಪ್ರಕಾಶ(ದಶರಥ), ನಿಂಗರಾಜು(ಭರತ), ಶಿವಲಿಂಗು(ಆಂಜನೇಯ), ಕೃಷ್ಣಮೂರ್ತಿ ರಾವ್(ವಾಲಿ), ರಮೇಶ್ (ವಸಿಷ್ಠ), ಶೇಖರ್(ಶತ್ರುಜ್ಞ), ಶಂಕರೇಗೌಡ(ಸೂತ್ರಧಾರಿ), ಶ್ರೀನಿವಾಸಮೂರ್ತಿ(ಸುಗ್ರೀವ), ಪುಟ್ಟರಾಜು(ಜಾಂಬವಂಥ), ಸೋಮಾಚಾರ್(ಶಮಂತ), ಹರೀಶ್(ಪ್ರಹಸ್ತ) ಮತ್ತಿತರ ಕಲಾವಿದರು ಡ್ರಾಮಾ ಮಾಸ್ಟರ್ ಪ್ರಜ್ವಲ್ ಜಗದೀಶ್ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದರು.

ಅಪ್ಪನಹಳ್ಳಿ ಅರುಣಕುಮಾರ್, ಅಂಚೆಬೀರನಹಳ್ಳಿ ಮಂಜುನಾಥ್, ಮಂಜೇಗೌಡ, ಸರ್ವೇಯರ್ ಮಂಜುನಾಥ್,ಶಿವಲಿಂಗೇಗೌಡ ಸೇರಿದಂತೆ 150ಕ್ಕೂ ಹೆಚ್ಚು ತಾಲೂಕಿನ ವಿವಿಧ ಗ್ರಾಮಗಳಿಂದ ಕಲಾಪೋಷಕರು ತೆರಳಿ ನಾಟಕ ಪ್ರದರ್ಶನ ಸಾಕ್ಷೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net