

ಮೈಸೂರು: ರಾವಾಂುಣ ಧರ್ಮ ಜಾತಿ, ಭಾಷೆ ಗಡಿ ಮೀರಿದ ಮಹಾಕಾವ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಂುದ ಅರ್ಥಶಾಸ ಅಧ್ಯಂುನ ವಿಭಾಗದ ಅಧ್ಯಕ್ಷ ಪ್ರೊ. ಎಸ್.ಆರ್. ಕೇಶವ ಹೇಳಿದರು.
ಮೈಸೂರು ವಿಶ್ವವಿದ್ಯಾಲಂುದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಂುಂತಿ ಕಾಂರ್ುಕ್ರಮದಲ್ಲಿ ವಾತನಾಡಿ, ವಾಲ್ಮೀಕಿ ಜಂುಂತಿ ಆಚರಿಸಿದರೆ ನಮಗೆ ನಾವೇ ಗೌರವ ಕೊಟ್ಟಂತೆ. ವಾಲ್ಮೀಕಿ ರಾವಾಂುಣ 300 ಕ್ಕೂ ಹೆಚ್ಚು ಭಾಷೆಯಲ್ಲಿ ಇದೆ. ರಾವಾಂುಣ ತನ್ನ ಸಂಸ್ಕೃತಿಯ ಮೂಲಕ ಇಡೀ ಪ್ರಪಂಚವನ್ನೇ ಆಕ್ರಮಿಸಿದೆ ಎಂದು ಹೇಳಿದರು.
ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ ಲೋಕನಾಥ್ ಮಾತನಾಡಿ, ರಾವಾಂುಣ ಕೇವಲ ಒಂದು ಕತೆಂುಲ್ಲ ಅದೊಂದು ಸುಂದರವಾದ ಜೀವನ. ಹಾಗಾಗಿ ವಾಲ್ಮೀಕಿ ಕೃತಿಯ ಸಾರ ಮತ್ತು ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ನಾವು ಅವರ ಪರಂಪರೆಂುನ್ನು ಗೌರವಿಸೋಣ ಎಂದರು.
ವೇದಿಕೆಯಲ್ಲಿ ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ವಿ.ಆರ್. ಶೈಲಜಾ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದ ಮುಖ್ಯಸ್ಥ ಎನ್.ಎಸ್ ಚಿದಾನಂದ ಮೂರ್ತಿ ಹಾಗೂ ಇತರರು ಇದ್ದರು.