

ಕಲಘಟಗಿ: ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಗ್ರಂಥದಿಂದ ದೇಶದಲ್ಲಿ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಂಡಿವೆ ಎಂದು ತಹಸೀಲ್ದಾರ್ ವೀರೇಶ ಮುಳಗುಂದಮಠ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ಇಂದಿಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ ಎಂದರು.
ತಾಪಂ ಇಒ ಪರಶುರಾಮ ಸಾವಂತ, ನ್ಯಾಯವಾದಿ ರಮೇಶ ಸೋಲಾರಗೋಪ್ಪ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಜೆ. ಯೋಗಪ್ಪನವರ, ರಾಜಶೇಖರ ಕುಂಬಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಬಿಜೆಪಿ ತಾಲೂಕು ಅಧ್ಯಕ್ಷ ಯಲ್ಲಾರಿ ಶಿಂಧೆ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಫಕೀರಗೌಡ ದೊಡ್ಡಮನಿ, ಸಿದ್ದಪ್ಪ ತಳವಾರ, ಭೀಮಣ್ಣ ಬ್ಯಾಡರಕೊಪ್ಪ , ವಿರೂಪಾಕ್ಷಿ ಮದ್ನೂರ, ಫಕೀರೇಶ ಅಪ್ಪಣ್ಣವರ, ಎಸ್.ಎಚ್. ಭಜಂತ್ರಿ, ಶಶಿಧರ ಕಟ್ಟಿಮನಿ, ಮಂಜುನಾಥ ವಾಲಿಕಾರ, ಬಸವರಾಜ ದ್ವಾರಕೂಜಿ, ಚಂದ್ರು ತಳವಾರ, ಸುಭಾಸ ಸುಣಗಾರ, ಉದಯ ಗೌಡರ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.