ಮೈಸೂರಿನಲ್ಲಿ ರಾಮಸ್ವಾಮಿ ಸ್ಮರಣೆ

Ramaswamy
Published on

ಮೈಸೂರು: ಭಾರತಕ್ಕೆ ಸ್ವಾತಂತ್ರೃ ದೊರೆತರೂ ಮೈಸೂರು ಪ್ರಾಂತ್ಯಕ್ಕೆ ಸ್ವಾತಂತ್ರೃ ದೊರೆತ್ತಿರಲಿಲ್ಲ. ಈ ಸಂದರ್ಭ ನಡೆದ ವಿದ್ಯಾರ್ಥಿ ಚಳವಳಿಯಲ್ಲಿ ಗುಂಡೇಟಿಗೆ ಬಲಿಯಾದ ರಾಮಸ್ವಾಮಿ ಅವರ 76ನೇ ವರ್ಷದ ಪುಣ್ಯಸ್ಮರಣೆಯನ್ನು ಬುಧವಾರ ಯುವ ಭಾರತ್ ಸಂಘಟನೆ ವತಿಯಿಂದ ರಾಮಸ್ವಾಮಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹುತಾತ್ಮ ರಾಮಸ್ವಾಮಿ ಸ್ಮಾರಕಕ್ಕೆ ಮೇಯರ್ ಶಿವಕುಮಾರ್ ಪುಷ್ಪನಮನ ಸಲ್ಲಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ದೊರೆತರೂ ಮೈಸೂರು ಪ್ರಾಂತ್ಯಕ್ಕೆ ಸ್ವಾತಂತ್ರೃ ದೊರೆತ್ತಿರಲಿಲ್ಲ. ಮೈಸೂರು ಪ್ರಾಂತ್ಯಕ್ಕೂ ಸ್ವಾತಂತ್ರೃ ದೊರೆಯಬೇಕು ಎಂಬ ಉದ್ದೇಶದಿಂದ ನಡೆದ ವಿದ್ಯಾರ್ಥಿ ಚಳವಳಿಯಲ್ಲಿ ಪಾಲ್ಗೊಂಡಿದ್ದ 17 ವರ್ಷದ ಯುವಕ ರಾಮಸ್ವಾಮಿ ಅಂದು ಮೈಸೂರು ರಾಜ್ಯದ ಕಮಿಷನರ್ ನಾಗರಾಜರಾಯರ ಗುಂಡೇಟಿಗೆ ಬಲಿಯಾದರು. ರಾಮಸ್ವಾಮಿ ಅವರ ತ್ಯಾಗ, ಬಲಿದಾನವನ್ನು ನಾವೆಲ್ಲರು ಶ್ರಮಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ಎಲ್. ನಾಗೇಂದ್ರ, ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಾಹಿತಿ ಪುಷ್ಪಾ ಅಯ್ಯಂಗಾರ್, ಯುವ ಭಾರತ್ ಸಂಘಟನೆ ಸಂಚಾಲಕ ಅಜಯ್ ಶಾಸ್ತ್ರಿ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net